ಶ್ರೀ ಅಂಗಾರಕ ಸ್ತೋತ್ರ
ಗಂಗಾಜನಕ ಜಯೇಶ ಪ್ರಿಯತರ
ಮಂಗಳ ನಮೋ ನಮೋ ಪಾಲಯಮಾಂ ಪ
ತುಂಗ ಮಹಿಮ ವರಾಹಧರಾಸುತ
ಮಂಗಳಪ್ರದತೇ ನಮೋ ನಮೋ ಅಪ
ಸಾಧು ಜನಪ್ರಿಯ ವೃಷ್ಟಿಕೃದ್ ವೃಷ್ಟಿ
ಹರ್ತಾದುರ್ಜನ ಭೀಕರ ಭೋ
ವಿದ್ಯುತ್ತೇಜ ಕುಮಾರ ನಮೋ ನಮೋ
ಶಕ್ತಿಪಾಣೇ ತ್ವಂ ಪಾಲಯಮಾಂ 1
ಸಾಮಗಾನ ಪ್ರಿಯ ದೇಹಿಮೇ ಸಪ್ತ -
ಸಾಮಭಕ್ತಿ ಪ್ರತಿಪಾದ್ಯ ಹರೌ
ನಿರ್ಮಲ ಭಕ್ತಿಂ ಸಜ್ಜನ ಸಂಗಂ
ಜ್ಞಾನಾಯುರ್ಬಲಾದ್ವೈಶ್ವರ್ಯಂ 2
ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸ
ವಿಶ್ವರೂಪನು ನಿನ್ನೊಳ್ ಜ್ವಲಿಸುತಿಹ
ಅಂಗಾರಕ ನಮೋ ಭೂಮಿಜ ಕೇವಲ
ಕೃಪಯಾ ಸಂತತ ಪಾಲಯಮಾಂ 3 ಪ