ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲೆಯರೆಲ್ಲರು ಬನ್ನಿರೆ ರನ್ನದ ಕೋಲ್ಗಳನೀವ್ ಪಿಡಿದು ಪ. ಮೇಲಹ ಪದಮಂ ಪಾಡುವ ಕೋಲಾಹಲ ಸಮಯವಿದು ಅ.ಪ. ಶರಧಿತನೂಭವೆ ನೀ ಬಾ ಬಾ ನೆರೆಮೆರೆವೀ ಶರದುತ್ಸಹಮಂ ಅರಿಪುತು ಜಗಕಿಂದು 1 ನಿಗ್ರಹಕಾರ್ಯದಿಂದುಗ್ರನಾಗಿಹ ಭರ್ಗನಕೆಲಕೈತಂದು ವ್ಯಗ್ರತೆಯಿಳಿಸಿ ಪೊರೆ ಶೀಘ್ರದಿ ಗಿರಿಸುತೆ ಸಮಗ್ರ ಭಾರತಮಿಂದು2 ಸರಸ್ವತಿ ಬಾ ನಿನ್ನರಸನ ಕೆಲಸಾರ್ ಧರೆಯೊಳ್ ಸುಪ್ರಜರಂ ನೆರೆ ಸೃಜಿಸುವ ವೋಲ್ ಅರುಹು ವಿಚಕ್ಷಣೆ ಅಸುರರ ಪಡೆಯದಿರೆನ್ನು3 ಶರದಿತನೂಭವೆ ಅರಸಗೆ ನೀನೊರೆ ಪರಿಪರಿ ವಿಧದಿಂದಂ ಕೊರತೆಯದಿಲ್ಲದೆ ಪೊರೆ ಜಗಮೆನ್ನುತ ಪೊರೆವೆವು ಛಲದಿಂದಂ4 ಭಾರತ ಜನನಿಯ ಭಾಗ್ಯೋದಯಮಂ ತೋರಿರೆ ಶಕ್ತಿತ್ರಯರೆ ಭಾರತವೀರರಿಗಾರೋಗ್ಯೈ ಶ್ವರ್ಯಂಗಳ ಕರುಣಿಸಿರೇ 5 ರಾಷ್ಟ್ರಪ್ರಮುಖರ ಕಷ್ಟಂಗಳ ನಾ ವೆಷ್ಟೆಂದೊರೆದಪೆವೇ ಸೃಷ್ಟಿ ಸ್ಥಿತಿ ಲಯಕರ್ತರು ನೀವಿರೆ ದೃಷ್ಟಿಸಿರೀಗೆನ್ನುವೆವೆ 6 ಕನ್ನಡತಾಯಿಯ ಕನ್ನೆಯರಾವು ಉನ್ನತಿಯನ್ನೆಳಸುವೆವು ಮನ್ನೆಯರ್ ನೀವೆಮ್ಮೋಳಿನ್ನಾವೇಶಿಸೆ ಧನ್ಯರು ಮಾನ್ಯರು ನಾವಹೆವು7 ಆರ್ಯಮಹಿಳೆಯರೆನೆ ವೀರಮಾತೆಯರೆನೆ ಧಾರುಣಿಯೊಳಗೆಮ್ಮಂ ಧೈರ್ಯಸ್ಥೈರ್ಯೌದಾರ್ಯ ಗುಣಂಗಳ ಪೂರಿತರಪ್ಪಂತೊಸೆವುದೆಮಗಿನ್ನು 8 ಒಲಿದೆಮ್ಮನು ನೀವ್ ನೆಲೆಸಿರೆ ನಲವಿಂ ಬಲಗೊಳ್ಳುತ್ತಾನವರತಂ ಕಲಿಯುಗಮಲ್ಲಿದು ಕೃತಯುಗಮೆನುವೋಲ್ ಬೆಳಗುವೆವೆಲ್ಲೆಡೆಯೋಳ್9 ಪರಿ ಭಾವಿಸಿ ಮನ್ನಿಸಿರೆ ಶ್ರೀವರ ಶ್ರೀಶೇಷಗಿರೀವರ ನಾವಗ ಮೋವುಗೆ ಕರುಣಿಸಿರೆ 10
--------------
ನಂಜನಗೂಡು ತಿರುಮಲಾಂಬಾ