ಶಕ್ತಿಗೊಲಿವೆಯೋ ರಂಗ ಯುಕ್ತಿಗೊಲಿವೆಯೋ ಪ
ಶಕ್ತಿ ಯುಕ್ತಿಗೇ ಒಲಿವನಲ್ಲ ಭಕ್ತಿಯೆಂಬುದಿಲ್ಲದಿರಲು ಅ.ಪ
ಸಕಲ ಭುವನಗಳೊಳು ಹುಡುಕಿ ವಿಕಲನಾದನಂದು ಕಶಿಪು
ಭಕುತಿಯಲಿ ಪ್ರಹ್ಲಾದ ಕರೆಯೆ ಮರುಘಳಿಗೆಯೆ ಕಂಭದಿ ಬಂದೆ1
ಸೆರೆಯೊಳರಿಯು ಜನಿಸಲಂದು ಬರಿಯಮಾಯೆಯ
ಸೆರೆಯೊಳಿರಿಸಿ ಭರದಿ ಗೋಕುಲಕೈದಿದೆಯಲ್ಲವೆ2
ಕರೆದ ಕೌರವರಿಗೊಲಿಯಲಿಲ್ಲ ಕರೆಯದಾವಿದುರಗೊಲಿದೆ
ಅರಿಯಲರಿದು ಮಹಿಮೆಗಳ ಮಾಂಗಿರಿರಂಗ ಕರುಣಾಸಾಗರ 3