ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ಕೃಪಾಂಬುಧಿಯೆ ಜಯ ಸುಗುಣ ಶರನಿಧಿಯೆ ಜಯತು ಸಂಶ್ರುತನಿಧಿಯೆ ವಿಮಳ ಸುಧಿಯೇ ಪ ಜಯ ಸಮಸ್ತೋಪಧಿಯೆ ಜಯ ಸರ್ವಧೀಮತೆಯೇ ಜಯ ಜಯತು ಸಲಹೆನ್ನ ಸೌಭಾಗ್ಯ ನಿಧಿಯೆ ಅ.ಪ ನತ ನಿರ್ಜಿತ ವ್ರಾತೆ ರತಿಪತಿಪಿತ ಪ್ರೀತೆ ರತುನಕರ ಸಂಜಾತೆ ನುತಿಸಲೆನ್ನಳವೆ ನಿನ್ನನು ಲೋಕಮಾತೆ 1 ವಿಗಡವಿಶ್ರುತ ಮಾಯೆ ತ್ರಿಗುಣಾನ್ವಿತ ವಿದಾಯೆ ನಿಗಮ ನಿರುತೋಪಾಯೆ ನಿತ್ಯೆ ನಿರಪಾಯೆ ಜಗನ್ಮೋಹನೆ ಕಾಯೆ ಅಗಣಿತೋಪಮದಾಯೆ ಪೊಗಳಲೆನ್ನಳವೆ ನಿನ್ನನು ಲೋಕಮಾತೆ2 ಪರಮ ಶಕ್ತಿಗುಣಾಢ್ಯೆ ನಿರುತಾಗಮಾವೇದ್ಯೆ ಸ್ಮರನ ಪೆತ್ತತಿ ಚೋದ್ಯೆ ಸೌಖ್ಯ ಪ್ರದಾದ್ಯೆ ಸುರನಗರದಧಿನಾಥ ವರಲಕ್ಷ್ಮೀಕಾಂತನಾ ಅರಸಿ ಸಿರಿಮಾಲಕ್ಷ್ಮಿ ಭವರೋಗ ವೈದ್ಯೇ 3
--------------
ಕವಿ ಲಕ್ಷ್ಮೀಶ