ಸ್ಥಿರವೆಂದು ನಂಬಿ ಕೆಡಬೇಡ ಮನುಜಾ ಧರಣಿ [ಬಾಳು]
ಕರುಣೆಯಿಹುದು ಮಾ[ಂಗಿರೀಶನ] [ನಂಬಿದರೆ] ಪ
ಕ್ಷೀರಾಬ್ಧಿಗೈದು ಮುದದಿ ಪೊರೆವನು ಸ್ತನ್ಯದಿಂ
ಹೀರಿ ತೇಲುತ ಬೆಳೆದು ತೋರಮುತ್ತುಗಳಾ
ಹಾರ ಪದಕಗಳಿಂದ ಚಾರುಭೂಷಣದಿಂದ
ಮಾರಸುಂದರನೆನಿಪ | ಮೂರು ದಿನದ ಬಾಲ 1
ಬಾಲತನ ಪೋಗಲು ಮೇಲೆ ಯೌವನವೊದಗಿ
ಬಾಲೆಯೋರ್ವಳಕರವ ಘಳಿಲದೊಳು ಹಿಡಿದು
ಮೇಲಾದ ಸೌಭಾಗ್ಯವಲ್ಪಕಾಲವಿರುವಾಗ
ಕಾಲದೂತರು ಪಿಡಿಯಲೊಡನೆ ಬ[ರುವ]ವರಿಲ್ಲ 2
ಉಕ್ಕುವ ಯೌವನದ ಸೊಕ್ಕಿಲ್ಲ ಮರುದಿನ
ಉಕ್ಕುಕ್ಕಿ ಬಸವಳಿದು ಶಕ್ತಿಗುಂದಿ
ಸುಕ್ಕು ಸುಕ್ಕಿನ ದೇಹ[ಭಾ]ವವಿಲ್ಲದ ಬಾಳ
ಭಕ್ತಿಗೆ ಮನಮರೆಯೆ ಭಕ್ತಗತಿಯದರಿಂದ 3
ಧನವ ದಾಯಾದಿಗಳು ಮನವ ಕಾಮಾದಿಗಳು
ಸನುಮತ ಜ್ಞಾನವನ್ನು ದುರಿತಕಾರ್ಯ
ತನುಜ ತನುಜೆಯರೆಲ್ಲರವರವರ ಸೌಖ್ಯವನು
ಸನಿಹದಿಂ ಸೂರೆಗೈವರಿನ್ನೇತರಾಸೆ 4
ಕುಂಟು ಜೀವವಿರುವನಕ ನೆಂಟರಿಷ್ಟರು ಹಣವ
ಗಂಟನುಂಗಲು ಬರುತಲೆಂಟೆಂಟುದಿನವಿಹರು
ಗಂಟು ತೀರಿದ ಬಳಿಕ ಪಾಪಪುಣ್ಯಗಳ ಹೊರತು [ಏ
ನುಂಟು ಈಭವದ ನಂಟಿನಲಿ ಯದರಿಂದ 5
ಜೀವ ತಾ ಜನಿಪಂದು ರವೆಯಷ್ಟು ತರಲಿಲ್ಲ
ಅವನಿಯಾ ಬಿಡುವಂದು ಜವೆಯಷ್ಟ ಹೊರಲಿಲ್ಲ
ಭಾವಶುದ್ಧಿ ಬೇಕನಿಶ ಮಾವಿನಾಕೆರೆರಂಗನ
ಸೇವಿಸಿದೊಡಾ ರಂಗ ಭವವೆಲ್ಲ ಕಳೆವಾ 6