ಗುರು ಸಾರ್ವ _ ಭೌಮಾ
ದೊರಕಿಸುತ ಹರಿಕರುಣ
ಪೊರೆ ರಾಘವೇಂದ್ರಾ ಪ
ಅಂದು ಹರಿ ತವಶರದಿ
ಕರ ಪೊರೆದಂತೆ
ನಂದಿ ಸುತ ದುರಿತೌಘ
ಇಂದೆನಗೆ _ ಮೈದೊರು ಗುರುವೇ
ಕುಂದು ಮಯ ಕಲಿಯೊಳಗೆ
ಕಂದುತಿಹ ಕಂದರನು
ತಂದೆ ಗುರು ಕಾಯದಿರೆ
ಮುಂದು ಬರೆ ಆಗುವದೆ ಸ್ವಾಮೀ 1
ಕತ್ತಲೆಯು ಸುತ್ತಿಹುದು
ಮುತ್ತಿಹವು ಕುತ್ತುಗಳು
ಬತ್ತಿಹವು ಶಕ್ತಿಗಳು
ಹತ್ತವೈ ಚಿತ್ತದೊಳು ಏನೂ
ಎತ್ತುಗಳ ತೆರದಂತೆ
ಸುತ್ತುತಲಿ ಭವದಲ್ಲಿ
ಭಕ್ತಿಯನು ಕಾಣದಲೆ
ಮೃತ್ಯುವಿಗೆ ತುತ್ತಾಹೆ ನಲ್ಲೋ 2
ಪರಿಪರಿಯ ಹರಕೆಗಳ
ಪೂರೈಸಿ ಭಕುತರಿಗೆ
ನಿರುತದಲಿ ಪೊರೆವವಗೆ
ಭಾರವೇ ನಾ ನೊಬ್ಬ ಧೊರೆಯೇ
ಗುರು ಸೇವೆ ಮಾಡರಿಯೆ
ಬರಿ ಮೂಢ ಕಡು ಪಾಪಿ
ಶಿರವಿಡುವೆ ಚರಣದಲಿ
ಕರುಣಾಳು ಭರವಸೆಯೆ ನನಗೇ 3
ಪ್ರಹ್ಲಾದ ಬಲಿತಾತ
ಬಾಹ್ಲೀಕ ಕುರುಪೋಷ
ಶ್ರೀ ಹರಿಯು ಗುರುಭಕ್ತಿ
ವಾಹಿನಿಯ ಹರಿಸೈಯ ಸತ್ಯಸಂಧಾ
ದೇಹದಲಿ ಬಲವಿಲ್ಲ
ಈಹಗಳು ಬಿಡದಲ್ಲ
ಬಾಹಿರನು ನಿನಗಲ್ಲ
ತ್ರಾಹಿ ಗುರು ನೀ ಬಲ್ಲೆ ಎಲ್ಲಾ4
ಶ್ರೀ ಮಧ್ವ ಗುರು ಚೇಲ
ತಾಮಸರ ನಿರ್ಮೂಲ
ಶ್ರೀಮಂತ ಗುಣಮಾಲ
ಶ್ರೀ ಮನೋಹರ ಕೃಷ್ಣವಿಠಲ ಯಜಕಾ
ಕಾಮಿತಾ ಫಲದಾತ
ನೇಮದಲಿ ಹರಿನಾಮ ನುಡಿಸೆಂಬೆ ಸತತಾ 5