ಶ್ರೀನಿವಾಸ ನಿನ್ನ ನಂಬಿದ ದಾಸನ
ಎನ್ನನು ಕಾಯೋ ಶ್ರೀವಾಸುಕಿಶಯನ ಪ
ರೂಪರಹಿತ ಬಹುರೂಪ ಧರಿಸಿಹ
ಶ್ರೀಪತಿ ಎನ್ನನು ನೀಪರಿಪಾಲಿಸು 1
ಕಾಲರೂಪ ಬಹುಲೀಲೆಯ ತೋರುವ
ಮೂಲಪುರುಷ ಸುರಪಾಲಕ ಶ್ರೀಹರಿ 2
ಶಕ್ತಿಗಳನು ಅವ್ಯಕ್ತದೊಳಿರಿಸಿ ಸ
ಮಸ್ತ ವಸ್ತುವ ಸುವ್ಯಕ್ತ ಪಡಿಸಿದ 3
ಕಲ್ಪಕೋಟಿ ನಿನಗಲ್ಪಕಾಲ ಪರಿ
ಕಲ್ಪಿತ ಸುರನರ ಕಲ್ಪಭೋಜ ಹರಿ 4
ಖಂಡಪರಶು ಅಖಂಡಲಾದಿ ಸುರ
ಪುಂಡರೀಕ ಪದ 5
ಮಂದರಧರ ಗೋವಿಂದ ಮುಕುಂದ ಸ
ನಂದನಾದಿ ಮುನಿಬೃಂದ ಸುವಂದಿತ 6
ಸಾರಸುಗುಣ ಪರಿವಾರ ಸಜ್ಜನಾಧಾರ
ಧೀರವರದವಿಠಲ ಹರಿ 7