ಶತ್ರುಗಳ ಬೇಗ ಜಯಿಸು ಪ.
ಶಿಶುವಾದ ಪ್ರಲ್ಹಾದ ಪೇಳಿದ ಕ್ಷಮೆ ತಾಳಿದ ನಯನುಡಿಗಳ ಕೇಳ್ದ
ನಿನ್ನ ತೋರೆಂದು ಹಾಟಕ
ಬಂದ ದೈತ್ಯನ ದೇಹದಿಂದ
ದೀನ ಬಂಧು ಗೋವಿಂದ 1
ಶತ್ರುಸಂಚಯ ಪಚನ
ವಿಭಾವನ ದಾನವಕೂಟ ಮಥನ
ಲೋಕಪಾವನ ದಯಕರ ಪಕ್ಷಿಗಮನ
ಗೆಲ್ವ ಶಕ್ತಿಕೊಡುವರೆ ಬಲ್ಲನ 2
ಈ ಭೂಮಿಗತವೈರಿಜನರೆಲ್ಲಾ ಕೂಡಿಹರಲ್ಲ ಇನ್ನೂ ಹತರಾಗಲಿಲ್ಲ
ನಾ ಬಲಹೀನನೆಂಬುದ ಬಲ್ಲ ಶ್ರೀಭೂನಲ್ಲ ನೀನರಿಯದುದಿ
ಲಾಲಿಪರಿಲ್ಲ ಆದರು ಭಯವಿಲ್ಲ
ಸೂತ ರಕ್ಷಿಸು ಜಗನ್ನಾಥ 3