ನಿತ್ಯ ಮಂದಾರ ತರುವಂತೆಕುಂದದಲ ಭೀಷ್ಟಗಳ ಗರೆವ | ಸುರ ತರುವಾ ಪ
ವಾಗೀಶ ಕರಜಾತ | ನಿಗಮಾರ್ಥ ಕೋವಿದರಭೋಗಿಶಯನನ ಭಕುತ | ಭಾಗ್ಯ ದಾತೃಗಳ |ಯೋಗಿ ಕುಲವರ್ಯ ಹೃ | ದ್ರೋಗ ನೀಗುವರಜಾಗು ಮಾಡದೆ ಭಜಿಪ | ಭಕ್ತರನು ಪೊರೆವರನು 1
ಭವ ಭವಣೆ ಹರಿಸು ವರ |ನವ ನವ ಸ್ತೋತ್ರಗಳ | ಕವನ ರೂಪದಿ ಪೇಳಿಪವನಾಂತರಾತ್ಮಕನ | ಪರಿತೋಷ ಗೈದವರಾ 2
ಗರಳ ಅಂಘ್ರಿ ಕಮಲಂಗಳನುನೆರೆನಂಬಿ ಸುಖಿಸುವರ | ಸುರವ ಭಯ ವಿರಹಿತರ 3
ಉಕ್ತಿಯನು ಸ್ವಪ್ನದಲಿ | ಶಕ್ತಹಯಮುಖಪೇಳೆಯುಕ್ತಿಮಲ್ಲಿಕೆ ಮಾಲೆ | ಮೌಕ್ತಿಕವ ನಿತ್ತವರ |ಭಕ್ತಿಪಥ ತೋರಿ | ಕು | ಯುಕ್ತಿಗಳನೇ ಕಳೆದುಮುಕ್ತಿ ಮಾರ್ಗವ ತೋರ್ವ | ಭಕ್ತಿಯೋಗಿಗಳಾ 4
ಮಾಯಿ ಶೈವರು ಶಾಕ್ತ್ಯ | ಅನ್ಯಮತಗಳಗೆದ್ದುಜಯ ಪತ್ರ ಘಂಟೆಗಳ | ವಿಜಯ ಸಾರಥಿಗಿತ್ತು |ಭಯ ವಿನಾಶನು ನಮ್ಮ | ತೋಯಜಾಂಬಕ ಸಿರಿಹಯ ವದನನರ್ಚಿಸುವ | ವಾದಿರಾಜರನೂ 5
ಅದ್ವೈತ ತಮ ಸೂರ್ಯಮೇದಿನೀ ಸುರವಂದ್ಯ | ಶ್ರೀವಾದಿರಾಜರನೂ 6
ಭಾವಿ ಮಾರುತಿಯ | ದಿನ ದಿನದಿ ಪ್ರಾರ್ಥಿಪರಭಾವ ಕೊಲಿಯುತ ತೋರ್ವ | ಹಯ ಮುಖಾತ್ಮಕನು |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನಭವ್ಯ ರೂಪವ ಹೃದಯ | ದವಕಾಶದೊಳಗೇ 7