ಭಕ್ತಿ ಒಂದೇ ಸಾಕು ಸಜ್ಜನರಿಗೆ | ಕು
ಯುಕ್ತಿಯಾತಕೆ ಹಲವು ಬಗೆ ಪ
ಶಕ್ತರಾಗಿಹ ಅಧಿಕಾರಿಗಳಿಗೆ ಕು-
ಯುಕ್ತಿ ಏತಕೆ ಹಲವು ಬಗೆ ಅ.ಪ
ದೀನರು ನಾವೆಂದು ದಿನ ದಿನದೀ
ನಾನು ಎಂಬುದು ಬಿಟ್ಟಿರುವವಗೆ 1
ಲೇಸಾದ ದಾರಿಯೊಳ್ ನಡಿಯುವರಿಗೆ2
ಹರುಷ ಶೋಕಗಳೊಂದೆ ಸಮನಾಗಿ ತಿಳಿದು
ಪುರುಷ ಪ್ರಯತ್ನಗಳನು ಮೆರೆದು
ಗುರುರಾಮವಿಠಲನ ಸ್ಮರಿಪರಿಗೆ 3