ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಾಘವೇಂದ್ರರ ಸ್ತೋತ್ರ ವಿನಯಾದಿಂದಲಿ ನಮಿಸುವೆನಾ ವೃಂದಾ ವನದಿ ರಾಜಿಪ ರಾಘವೇಂದ್ರ ಗುರವಿನ ಪ ದುರಿತವಾರಣ ಪಂಚಾನನನ ನರ - ಹರಿರೂಪಸ್ತಂಭದಿ ಪ್ರಕಟಗೈಸಿದನ ಹರಿಭಕ್ತಾಗ್ರಣಿಯೆಂದೆನಿಪನ ನಾರ - ದರ ಉಪದೇಶಗರ್ಭದಿ ಕೈಕೊಂಡಿಹನ 1 ಸಿರಿವ್ಯಾಸತೀರ್ಥರೆನಿಪನ ಪುರಂ - ದರ ದಾಸಾರ್ಯರಿಗು ಪದೇಶ ಗೈದವÀನ ವರಚಂದ್ರಿಕಾ ರಚಿಸಿದನ ದುಷ್ಟ ಪರಮಾದ್ರಿಗಳಿಗೆ ಕುಲಿಶನೆನಿಪನ 2 ಶ್ರೀ ಸುಧೀಂದ್ರ ಕರಾಬ್ಜಜನ ದಿವ್ಯ ಭಾಸುರ ಪರಿಮಳ ಗ್ರಂಥ ಕರ್ತರನ - ಮೀಸಲ ಮನದಿ ಭಜಿಪರನ ದೋಷ - ನಾಶನ ಗೈಸಿ ಪೋಷಿಸುವ ಶಕ್ತರನ3 ವರಮಂತ್ರ ಸದ್ಮನಿಲಯನ ಶ್ರೀ - ಗುರು ಮಧ್ವಮತ ದುರಂಧರದೆನಿಸುವನ ಹರಿಪ್ರೀತಿ ಪೂರ್ಣಪಾತ್ರರನ ಈ ಧರಿಯೊಳು ಬಹುಪರಿ ಮೆರೆವ ಮುನಿಪನ 4 ತುಂಗಭದ್ರಾತೀರವಾಸನ ಶುಭ ಮಂಗಲಚರಿತ ಕಮಂಡಲಧರನ ರಂಗವರದೇಶ ವಿಠಲನ ಪದ ಭೃಂಗ ಯತಿಕುಲ ಕಂಜಾರ್ಕ ಸನ್ನಿಭನ 5
--------------
ವರದೇಶವಿಠಲ