ಜಗದಾದಿ ನಮಿತ ಆಗಮಾತೀತ
ಖಗವರಗಮಿತ ಭಾಗವತಪ್ರೀತ ಸುಚರಿತ ಪ
ಭವ ಬಾಧ್ಹರಣ ಜನನಮರಣ
ಭಯನಿವಾರಣ ದಯಸುಸದನ
ಭುವಿಜಾರಮಣ ಭಕ್ತೋದ್ಧಾರಣ
ವಿಮಲಜ್ಞಾನ ಕರುಣಿಸು 1
ಅಮಿತಲೀಲ ಕುಜನಕಾಲ
ರಮೆಯಲೋಲ ಶರಣುಶೀಲ
ಕೌಸ್ತುಭಮಾಲ ಸುಮನಪಾಲ ಎನ್ನ
ಭ್ರಮಜಾಲ ಛೇದಿಸು 2
ಭೃತ್ಯಲಲಾಮ ಶಕ್ತರಕಾಮ
ಪೂರ್ತಿನಿಸ್ಸೀಮ ಕರ್ತುಶ್ರೀಭೌಮ
ನಿತ್ಯನಿರಾಮ ಜಗದೋದ್ದಾಮ
ಮುಕ್ತಿಪದ ಸೋಮ ಶ್ರೀರಾಮ 3