ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ | ಪ್ರಜರಿಗೆ ದೊರಕುವದೆ | ತ್ರಿಜಗದೊಳಗೆ ಮುಂದೆ | ಅಜನಾಗಿ ಬಪ್ಪಗೆ | ಭಜನೆ ಮಾಡುವಂಥ ಸುಜನರಿಗಲ್ಲದೆ ಪ ಮಂದಾಕಿನಿ ಮಿಕ್ಕಾದ ನದಿಗಳಲ್ಲಿಗೆ ಪೋಗೆ | ಮಿಂದು ನಾನಾ ಕ್ಷೇತ್ರವ ಬಂದೂ ಬಿಡದೆ ತಿರುಗಿ ವೇದ ಶಾಸ್ತ್ರಗಳು | ಚಂದದಿ ಓದಿಕೊಂಡು | ಕುಂದದೆ ವ್ರತ ಯಾಗ ಯೋಗ ಮಾಡಲೇನು | ಬಿಂದು ಮಾತ್ರ ಫಲವಿಲ್ಲ | ಸುರರು ಒಂದಾಗಿ ಒಂದಿನ | ಅಂದು ಪೀಯೂಷವ ಕರೆಯೆ ಉಂಡವರಾರು 1 ಮಾನವ | ನಾಡೊಳು ಉಡುಪಿ ಯಾತ್ರೆ ಮಾಡಿದರವಗೇನು ಲೇಶ ಸತ್ಕರ್ಮವು | ಕೂಡದು ಕೂಡದಯ್ಯಾ | ಬಿಡಾಲನಂದದಿ ತಿರುಗಿದಂತಾಗುವದು | ಕೇಡಿಗೆ ಗುರಿಯಾಗುವಾ | ಜೋಡು ಇಲ್ಲಿಗೆ ಬಂದು ತಿರುಗಿ ಪೋದರೆಯೇನು | ಆಡಲೇನದಕೆ ತಿಲಾಂಶ ಸುಖವುಂಟೆ 2 ತಮೋ ಯೋಗ್ಯ ಉಡುಪಿನ ಯಾತ್ರೆ ಮಾಡಲು | ಅಮಿತ ಬಲವಂತನಾಗಿ ಪುಟ್ಟಿ ಆಕ್ರಮಿಸಿ ಪುಣ್ಯವನೆ ಕೆಡಿಸಿ ತಮಕೆ ಸಾಧನವಾದ ಸುಖಬಟ್ಟು ಬಹುಕಾಲ | ರಮಣಿ ಮಕ್ಕಳು ಸಹಿತದಿ | ನಿತ್ಯ | ತಮಸಿನೊಳಗೆ ವಾಸಫಲ ವ್ಯರ್ಥವಾಗದು 3 ರಾಜಸ ಗುಣದಲ್ಲಿ ಈ ಯಾತ್ರೆ ಮಾಡಲು | ಭೂಷಣವನೆ ಯಿಟ್ಟು | ವಾಜಿ ಗಜವಾಗಿ ಸೌಖ್ಯ ಈ ಜಗದೊಳು ಒಟ್ಟು ಪೋಗೋದಲ್ಲದೆ ವಿ | ರಾಜಿಸುವದು ಬಲ್ಲದೇ | ರಾಜಮಂದಿರಕೆ ನವರತ್ನ ತೆತ್ತಿಸಿದಂತೆ | ಈ ಜನದ ಸುಖದ ಫಲ ವ್ಯರ್ಥವಾಗುವದು4 ಮುಕ್ತಿಯೋಗ್ಯನು ಬಂದು ಯಾತ್ರೆಯ ಮಾಡಲು | ಮುಕ್ತಿ ಉತ್ತಮ ಕುಲದಲ್ಲಿ | ವ್ಯಕ್ತನಾಗೀ | ದಿವ್ಯ ಮನದಲ್ಲಿ ವಿರುಕುತಿ | ಭಕ್ತಿಜ್ಞಾನದಲಿ ಬಾಳಿ | ಶಕ್ತನೆಂದೆನೆ ಸತತ ಶ್ರೀಮದಾರ್ಯರ | ಭಕ್ತಿಲಿ ಲೋಲಾಡುತ | ಭಕ್ತವತ್ಸಲ ವಿಜಯವಿಠ್ಠಲ ಕೃಷ್ಣಸಾರ | ಭೋಕ್ತನಲ್ಲಿಪ್ಪನು ಫಲ ವ್ಯರ್ಥವಾಗದು 5
--------------
ವಿಜಯದಾಸ