ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸಿನÀ ಜೀವನ ಕಳವಳವೇತಕೆ ಪ ಕ್ಷಣಿಕದ ಭಾಗ್ಯಕೆ ಪರದಾಟವೇತಕೆ ಅ.ಪ ಮರೆತು ದುರ್ದಿಶೆಯನು ಅರೆಗಣ್ಣಿನಲಿ ದೊರೆಯು ನಾನೆ ಎಂದು ಹರುಷದ ಮಾನಸ ತೆರೆಯಲಿ ಭಾಗ್ಯವ ಅನುಭವಿಸುತಲಿರೆ ಹರಕು ಮನೆಯೇ ನಿನ್ನರಮನೆಯಾಗಿದೆ 1 ಇಲ್ಲವೆಂದೇತಕೆ ಹಲ್ಲನು ಕಡಿಯುವಿ ಬಲ್ಲ ಮಾನವನಿಗೆ ಹಲ್ಲೇ ಆಯುಧ ಮುಳ್ಳಿನ ಹಾಸಿಗೆ ಮಲಗಲು ಸೌಖ್ಯವೆ ತಳ್ಳಿ ನಿಲ್ಲುವಗೆ ಇಲ್ಲೇ ವೈಕುಂಠ 2 ರಕ್ತದ ಕೋಡಿಯು ಹರಿಯುತಲಿರುವುದು ಮೃತ್ಯದೇವತೆ ಸದಾ ಕುಣಿಯುತಲಿರುವಳು ಮತ್ರ್ಯರ ಭಾಗ್ಯವು ಹತ್ತೇ ನಿಮಿಷವು ಇದ್ದರೇನು ಸುಖ ಇಲ್ಲದೇನು ಭಯ 3 ಮನದಲಿ ರಾಜ್ಯವ ಕಟ್ಟಬೇಕಣ್ಣ ಅನುಭವದರಮನೆ ಶೃಂಗರಿಸಣ್ಣ ಪ್ರಣತ ಪ್ರಸನ್ನನ ಆಲಯ ಮುಟ್ಟಲು ಅಣುಬಾಂಬ್ಗಳಿಗೂ ಶಕುತಿಯಿಲ್ಲಣ್ಣ4
--------------
ವಿದ್ಯಾಪ್ರಸನ್ನತೀರ್ಥರು