ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ನಿನ್ನೊರೆಗೆ ನಾ ತಿಳಿಯಲಾರೆ ಪ ಪನ್ನಗಾದ್ರಿವಾಸ ಶ್ರೀಹರೆ ಅ.ಪ. ಮಾನವ ನಾನು ಎನ್ನಿಂದ ಸಾಧ್ಯವಿರೆಇನ್ನೂ ಹೆಚ್ಚು ಹೆಚ್ಚು ಭಕುತಿಯನ್ನು ಬೇಡ ಬೇಡ 1 ಬೊಮ್ಮಾದಿ ದೇವತೆಗಳು ಅಮ್ಮ ಲಕುಮಿಯ ಸಹನಿಮ್ಮನ್ನು ತಿಳಿಯರಿನ್ನು ತಿಳಿವ ಹಮ್ಮು ನನಗೇಕೆ ಶೌರೇ 2 ಅನ್ಯಜೀವಿಯಂತರಂಗ ಎಂದೂ ತಿಳಿಯಲಾರೆ ನಾನುಇನ್ನು ಸರಸಿಜಾಮನೊಡಲ ನಿನ್ನ ತಿಳಿವುದೆಂತಹನೇ 3 ಇಷ್ಟೇ ಭಕುತಿಯಿಂದ ನೀನು ತುಷ್ಟನಾಗಿ ಸಲಹಬೇಕುಎಷ್ಟು ಕಷ್ಟಪಟ್ಟರೂ ನಿನ್ನಿಷ್ಟಕೆ ಸರಿ ಹೋಗುವದೆಷ್ಟು 4 ಭಕುತಿಯಲ್ಲಿ ಸತತವಿರಲು ಶಕುತಿಯನ್ನುನ್ನೀಯೊ ಎನಗೆಸಕಲ ಜಗದಿ ಮೆರೆವ ಗದುಗು ವೀರನಾರಾಯಣ5
--------------
ವೀರನಾರಾಯಣ