ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಧಾನ ಮಾರುತಗೆ ಪ ಮಂಗಳಂ ಪಾವನ ಮೂರುತಿಗೆ | ತ್ರಿವಿಧ ಸತ್ಕೀರ್ತಿಗೆ | ಮಂಗಳಂ ಸದ್ಗುಣ ಕೀರ್ತಿಗೆ ಅ.ಪ. ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ | ಚಿಕ್ಕವನಾಗಿ ಪುರಪೊಕ್ಕವಗೆ || ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ | ನಿಕ್ಕಿಸಿದರಣದ ವಿಷ ಭೋಕ್ತನಿಗೆ 1 ವೃಕೋದರ ಭೀಮಗೆ ವಿಶೋಕನೊಡೆಯಗೆ | ಬಕ ಜರಾಸಂಧ ಕೀಚಕ ವಧೆ ಮಾಡಿದಗೆ || ಸಕಲ ದಳದೊಳಗೆ ನಾಯಕನೇ | ನೀ | ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ 2 ಒಂದೆ ಅಕ್ಷರದಿಂದ ನಂದ ಕೊಡುವವನಿಗೆ ಒಂದೆರಡು ಮೂರಾರು ಮುರಿದವಗೆ || ಒಂದೆ ದೈವ ನಮ್ಮ ವಿಜಯವಿಠ್ಠಲ ಕೃಷ್ಣನ್ನ | ವಂದಿಸುವ ಶ್ರೀಮದಾನಂದತೀರ್ಥಗೆ 3
--------------
ವಿಜಯದಾಸ
ಹಾರುವಗೆ | ಮರದ ಮೇಲಿರುವಗೆ | ಮುದ್ರಿಕೆಯ ತೋರುವಗೆ | ವನ ಕೀರ್ತಿ ತೋರುವವಗೆ | ಹೀರುವವಗಾಕ್ಷಣದಿ | ಚೀರುವಗೆ ಅರ್ಭಟಿಸಿ | ಶುಭ ಮಂಗಳಂ 1 ವೃಕೋದರ ಭೀಮಗೆ | ಅಶೋಕದೊಡೆಯಗೆ | ಬಕಜರಾಸಂಧ ಕೀಚಕವಧನಿಗೆ | ಸಕಲ ದಳದೊಳಗೆ | ನಾಯಕನೆನೆಸಿ ಕಲಿಯ | ಬಂಧಕ ಶಕುತಿಗೆದ್ದ ಲೌಕಿಕ ಚರಿತಗೆ | ನಿತ್ಯ ಶುಭಮಂಗಳಂ2 ಒಂದೆ ಅಕ್ಷರದಿಂದ ಆನಂದ ಕೊಡುವವನಿಗೆ | ಒಂದೆರಡು ಈರೈದು ಮುರಿದವನಿಗೆ | ನಿತ್ಯ ಶುಭಮಂಗಳಂ3
--------------
ವಿಜಯದಾಸ