ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಧಾನ ಮಾರುತಗೆ ಪ ಮಂಗಳಂ ಪಾವನ ಮೂರುತಿಗೆ | ತ್ರಿವಿಧ ಸತ್ಕೀರ್ತಿಗೆ | ಮಂಗಳಂ ಸದ್ಗುಣ ಕೀರ್ತಿಗೆ ಅ.ಪ. ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ | ಚಿಕ್ಕವನಾಗಿ ಪುರಪೊಕ್ಕವಗೆ || ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ | ನಿಕ್ಕಿಸಿದರಣದ ವಿಷ ಭೋಕ್ತನಿಗೆ 1 ವೃಕೋದರ ಭೀಮಗೆ ವಿಶೋಕನೊಡೆಯಗೆ | ಬಕ ಜರಾಸಂಧ ಕೀಚಕ ವಧೆ ಮಾಡಿದಗೆ || ಸಕಲ ದಳದೊಳಗೆ ನಾಯಕನೇ | ನೀ | ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ 2 ಒಂದೆ ಅಕ್ಷರದಿಂದ ನಂದ ಕೊಡುವವನಿಗೆ ಒಂದೆರಡು ಮೂರಾರು ಮುರಿದವಗೆ || ಒಂದೆ ದೈವ ನಮ್ಮ ವಿಜಯವಿಠ್ಠಲ ಕೃಷ್ಣನ್ನ | ವಂದಿಸುವ ಶ್ರೀಮದಾನಂದತೀರ್ಥಗೆ 3
--------------
ವಿಜಯದಾಸ
ಎಂದು ಕಾಂಬುವೆ ನಿನ್ನ ಚರಣ ನಾರಾಯಣತಂದು ತೋರಯ್ಯ ನಾ ಬಂದೆನು ಶರಣ ಪ ನಿತ್ಯ ಒತ್ತುವ ಚರಣತೋರ ಗಂಗೆಗೆ ಜನ್ಮ ಕೊಟ್ಟಂಥ ಚರಣಮೂರು ಲೋಕವ ಹಿಡಿದ ಚರಣನಾರಿ ಅಹಲ್ಯೆಯ ಪೊರೆದ ಚರಣ 1 ಪ್ರ್ರಳಯ ಕಾಲದಿ ನೆಕ್ಕುತಿಹ ಚಿಕ್ಕ ಚರಣಇಳೆಗೆ ಸುಯೋಧನನಿಳಿಸಿದ ಚರಣಎಳೆಯ ಧ್ರುವ ತಾ ಕಂಡ ಚರಣತುಳಸಿ ವನದಲಿ ಕುಣಿದ ಚರಣಸುಳಿದು ಭಕ್ತರ ಪೊರೆವ ಚರಣ 2 ಅಖಿಲಾಂಡದ ಸೃಷ್ಟಿ ಸ್ಥಿತಿ ಲಯ ಕಾರಣಭಕುತರು ಕರೆಯಲೋಡುವ ದಿವ್ಯ ಚರಣಶಕಟ ದೈತ್ಯನ ಒದೆದ ಚರಣಯುಕುತಿ ಶಕುತಿಗೆ ಬರದ ಚರಣಯುಕುತಿ ಪಥವನು ತೋರ್ಪ ಚರಣಪ್ರಖರ ಗದುಗಿನ ವೀರನಾರಾಯಣ 3
--------------
ವೀರನಾರಾಯಣ
ಬರುತಲಿಹರು ನೋಡಿ ಗುರುವರೇಣ್ಯ ಸುಖತೀರ್ಥ ಯತಿವರರು ಪ ಹರಿದು ಬರುವ ಸುರನದಿಯ ಪ್ರವಾಹದ ತೆರದಲಿ ಪರಿಪರಿ ಪರಿವಾರ ಸಹಿತ ಅ.ಪ ಕರದಲಿ ಪಿಡಿದಿಹ ದಂಡ ಕಮಂಡಲ ಕೊರಳೊಳು ತುಳಸಿಯ ಚಿಗುರಿನ ಮಾಲೆಯು ಅರಿವಾರಿಜ ಲಾಂಛನಗಳಿಂದೊಪ್ಪುವ ವರ ದ್ವಾದಶ ನಾಮಗಳನು ಧರಿಸುತ 1 ಯತಿಗಳು ಗೃಹಿಗಳು ಬ್ರಹ್ಮಚಾರಿಗಳು ಶತಶತ ಸಂಖ್ಯೆಗಳಲಿ ಸೇರಿಹರು ಅತಿ ಸಂಭ್ರಮದಲಿ ನೋಡಲು ಪುರುಷ ರತುನವು ಮಾರ್ಗದ ಖತಿಪರಿಹರಿಸುತ 2 ಅವನಿಸುರರು ಮುಂಬದಿಯಲಿ ತಮ್ಮಯ ಕವಿತೆಗಳಲಿ ಗೋವಿಂದನ ಗುಣಗಳ ನವ ನವ ಸ್ವರದಲಿ ಪಾಡುತ ಕುಣಿಯಲು ಶ್ರವಣ ನಯನಕಾನಂದವ ಬೀರುತ 3 ತ್ವರೆಯಲಿ ಸರಿದು ತಾ ಬರುತಿರೆ ಯುವ ಕೇ- ಸರಿಯ ಧಿಕ್ಕರಿಸುವ ಸಂಭ್ರಮ ಗಮನ ಚರಣಯುಗಳ ಕಾಂತಿಯ ಪಸರಿಸುತಲಿ ಧರಣಿಯ ಪಾವನ ಮಾಡುವ ಬಗೆಯಲಿ 4 ಏನಿರಬಹುದೆಂದು ನೋಡುವರಿಗೆ ಕಾಣಿಸುವುದು ತೇಜದ ಪುಂಜ ಭೂನಿಲಯವ ಬೆಳಗಲು ಅತಿ ನೂತನ ಭಾನು ಉದಯಿಸಿದ ತೆರದಲಿ ಪೊಳೆಯುತ 5 ಪದುಮರಾಗ ಕಾಂತಿಯ ಮೀರಿದ ನಖ ಕೂರ್ಮ ಪ್ರಪದಗಳು ವಿಧಿಭವಮುಖ ಸುರಸೇವಿತ ಜಂಘವು ಮದಗಜ ಕರವನು ಪೋಲುವ ತೊಡೆಗಳು 6 ಪುಷ್ಪ ನಿತಂಬಗಳಲಿ ಪೊಳೆಯುತಲಿಹ ರೇಷ್ಮೆಯ ವಸ್ತ್ರವ ಧರಿಸಿಹರು ಕುಕ್ಷಿಲಲಾಟ ಶಿರೋಧರಗಳಲತಿ ಶ್ರೇಷ್ಠದ ತ್ರಿವಳಿಗಳಿಂದ ರಾಜಿಸುತ7 ಕೆಚ್ಚಿನ ವಕ್ಷಸ್ಥಳವತಿ ಸುಂದರ ಉಚ್ಚ ಪೀವರದ ಸ್ಕಂಧಯುಗಳವು ಸ್ವಚ್ಛದ ಕೆಂಬಣ್ಣದ ಕರತಲದಲಿ ಬಿಚ್ಚಿ ಹಾರುತಿಹ ಧ್ವಜಲಾಂಛನದಿ 8 ಚಂದಿರ ಬಿಂಬವಿದೋ ಪ್ರೇಕ್ಷಕರಾ ನಂದತರಂಗವ ಉಕ್ಕಿಸುತಿಹುದು ಒಂದು ಕಳಂಕವು ಕಾಣದಿರುವ ಅತಿ ಸುಂದರ ಪುರುಷವರೇಣ್ಯರು ಸೊಗಸಿಲಿ 9 ಸುಂದರ ಮಂದಸ್ಮಿತದಿಂ ಶೋಭಿಪ ಕುಸುಮ ತೆರದಲಿ ದಂತಗಳು ಮಂದಿಗಳಿಗೆ ಬಲು ಹರುಷವಿತ್ತು ಅರ ವಿಂದ ನಯನ ಆನಂದತೀರ್ಥ ಮುನಿ 10 ಕಿವಿಯಲಿ ಪೊಳೆಯುವ ತುಳಸಿಯದಳಗಳು ಅವಿರಳ ತೇಜದಿ ಹೊಳೆಯುವ ಕಪೋಲ ಭುವನತ್ರಯಗಳಭೀಷ್ಟವ ನೀಡುವ ಸುವಿಮಲ ಸುಂದರ ಭ್ರಕುಟಿ ವಿಲಾಸದಿ 11 ಅಕಲಂಕ ಶರೀರರು ಬರುತಿಹುದನು ಸಕಲ ಕಲಾಕುಶಲರು ನೋಡಿ ಶಕುತಿಗೆ ಮೀರಿದ ಮಾದರಿಯೆಂದರು ಪ್ರಕೃತಿ ಮಧುರ ಸರ್ವಾಂಗ ಸುಂದರರು 12 ಕಾಂತಿ ಸುಧೆಯ ಪಾನವ ಮಾಡಿರಿ ಸುಖ ಶಾಂತಿ ನಿಲಯರಾಶ್ರಯದಲಿ ಬಾಳಿರಿ ಚಿಂತೆ ಸಂತಾಪಗಳೆಲ್ಲವ ತೊಳೆಯಿರಿ ಸಂತತ ಹರಿದಾಸ್ಯದಲಿ ಪ್ರಸನ್ನರು 13
--------------
ವಿದ್ಯಾಪ್ರಸನ್ನತೀರ್ಥರು
ಭೋರನೆ ನಿಜಪರಿವಾರವೆಲ್ಲವೂ ಸೇರಿ ಪ. ಮಕರಕುಂಡಲಧರ ವಿಕಸಿತ ಮುಖಪದ್ಮ ಕೌಸ್ತುಭ ಶುಭ ವನಮಾಲಿ ಭಕುತ ವತ್ಸಲನೆಂಬ ಬಿರುದು ತೋರುತ ನಮ್ಮ ಶಕುತಿಗೆ ಸರಿಯಾದ ಸೇವೆ ಕೊಳ್ಳುವೆನೆಂದು 1 ಒಡೆಯನೀ ಗತಿಯೆಂಬ ಬಡವ ಭಕ್ತರನೆಲ್ಲು ಬಿಡನೆಂದು ಭವಸಿಂಧು ಪೊತ್ತನಿಂದು ತಡವ ಮಾಡದಲೆ ಸಂಗಡ ಬಂದೀ ನಿಲಯದಿ ನಡು ಮನೆಯಲಿ ನಿಂದು ಕೊಡುವೆ ಸೌಖ್ಯವನೆಂದು 2 ತುಳಸಿಧಾಮ ಸುಶೋಭಿತ ನಮಗೆ ಬೆಂ- ಬಲವಾಗಿರುವ ಸರ್ವ ಸ್ಥಳಗಳಲಿ ಅಲಸನಾಗದೆ ಶೇಷಾಚಲವಾಸನು ಶ್ರೀಭೂ- ಲಲನೆಯರೊಡಗೂಡಿ ನಲಿವ ಸಂಭ್ರಮದಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹಾರುವಗೆ | ಮರದ ಮೇಲಿರುವಗೆ | ಮುದ್ರಿಕೆಯ ತೋರುವಗೆ | ವನ ಕೀರ್ತಿ ತೋರುವವಗೆ | ಹೀರುವವಗಾಕ್ಷಣದಿ | ಚೀರುವಗೆ ಅರ್ಭಟಿಸಿ | ಶುಭ ಮಂಗಳಂ 1 ವೃಕೋದರ ಭೀಮಗೆ | ಅಶೋಕದೊಡೆಯಗೆ | ಬಕಜರಾಸಂಧ ಕೀಚಕವಧನಿಗೆ | ಸಕಲ ದಳದೊಳಗೆ | ನಾಯಕನೆನೆಸಿ ಕಲಿಯ | ಬಂಧಕ ಶಕುತಿಗೆದ್ದ ಲೌಕಿಕ ಚರಿತಗೆ | ನಿತ್ಯ ಶುಭಮಂಗಳಂ2 ಒಂದೆ ಅಕ್ಷರದಿಂದ ಆನಂದ ಕೊಡುವವನಿಗೆ | ಒಂದೆರಡು ಈರೈದು ಮುರಿದವನಿಗೆ | ನಿತ್ಯ ಶುಭಮಂಗಳಂ3
--------------
ವಿಜಯದಾಸ