ಶರಣು ಶರಣು ಶರಣು ದೇವಾಧಿಗಳೊಂದಿತ
ನಹುದು ಸ್ವಾಮಿ ಗಣನಾಥ ಶರಣು ಧ್ರುವ
ಅಖಿಳ ಭವನದೊಳು ಪೂಜಿತ
ಭಕುತ ಜನಕೆ ನೀ ಸಾಕ್ಷಾತ
ಶಕುತನಹುದಯ್ಯ ಪ್ರಖ್ಯಾತ 1
ಶುದ್ಧ ಬುದ್ಧರ ಸಹಕಾರ
ಬುದ್ಧಿನೀವ ಘನ ಉದಾರ
ರಿದ್ಧಿ ಗ್ಯಾಗೀಹ್ಯ ನೀ ಆಧಾರ
ಸಿದ್ಧಿದಾಯಕ ವಿಘ್ನಹರ 2
ಜನಕೆ ಮಾಡುವೆ ದೋಷನಾಶ
ಅನುದಿನವೆ ಮತಿ ಪ್ರಕಾಶ
ದೀನ ಮಹಿಪತಿಯ ಮನೋಭಾವಪೂರಿತಗಣಾಧೀಶ ಶರಣು ಶರಣು 3