ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಮಾಡೋ ರಂಗ ಹೇ ಕೃಪಾಂಗ ಪ ದಯಮಾಡಿ ನೀಯೆನ್ನ ಭಯವ ಪರಿಹರಿಸು ಚಿ- ನ್ಮಯ ಮೂರುತಿ ಸುಖಮಯ ಮಂದರಧರ ಅ.ಪ. ಪತಿತ ಪಾವನ ನೀನು ಪತಿತಾಗ್ರೇಸರ ನಾನು ಜತನದಿ ಭಕುತಿಯ ಪಥವ ತೋರಿ ನೀನು 1 ಮುಕ್ತಿ ಫಲಪ್ರದ ಶಕ್ತಿಯು ನಿನ್ನ ವ್ಯತಿರಿಕ್ತವಲ್ಲವೆಂದು ಭಕ್ತಿಯುವರವಳು...[?] 2 ಕಾಮಧೇನು ನೀನು ಕಾಮನಯ್ಯನು ನೀನು ಕಾಮಿತಫಲದಾತ ಮಾಮನೋಹಕ ತ್ರಾತ 3 ಸೃಷ್ಟಿಪಾಲಕ ನಿನ್ನ ಯಷ್ಟೆಂತವರ್ಣಿಪೆ ಅಷ್ಟು ಕರ್ತೃತ್ವಕ್ಕೆ ಶಿಷ್ಟಮೂರುತಿ ನೀನೆ 4 ಭಾರಿಭಾರಿಗೆ ನಿನ್ನ ಆರಾಧಿಸುವರ ಚಾರುಚರಣವನು ತೋರೊ ಮಾರಜನಕ 5 ಸಕಲಕ್ಕು ನೀ ಮುಖ್ಯ ಶಕಟಭಂಜನ ಕೇಳು ಪ್ರಕಟನಾಗಿಯೆನಗೆ ಶಕ್ತಿಯ ನೀಡೋ6 ಭೂವಲಯದೊಳು ನಾ ಆವಲ್ಯಪೋಗಲು ಕಾವಲು ನೀನೇ ಶ್ರೀವತ್ಸಾಂಕಿತನೇ 7
--------------
ಸಿರಿವತ್ಸಾಂಕಿತರು