ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಸುಕೃತವುಈ ನಾರಿಯರು ಈಪರಿ ಸುಖಿಸುವುದು ಪ. ಪಂಕಜನಾಭಗೆ ಶಂಖೋದಕವೆತ್ತಿಅಂಕದಲ್ಲಿಹೊ ಲಕುಮಿಯಅಂಕದಲ್ಲಿಹೊ ಲಕುಮಿಯ ನಲ್ಲಗೆಅಸಂಖ್ಯಸ್ತೋತ್ರವನೆ ಸ್ತುತಿ ಸೋರು 1 ದುರ್ಗಾದೇವಿಯ ರಮಣ ಭಾರ್ಗವಿರಾಮಗೆಶೀಘ್ರದಿ ಕೊಟ್ಟು ಕವಳವಶೀಘ್ರದಿ ಕೊಟ್ಟು ಕವಳವ ಗೋಗ್ರಾಸವಸ್ವರ್ಧುನಿ ಜನಕ ಕುಳಿತಾನೆ 2 ಹರಿವಾಣ ಇದ್ದಲ್ಲೆರಂಗಯ್ಯ ಬಂದು ಕುಳಿತಾನೆ 3 ವೀತದೋಷನ ಮುಂದೆ ಮಾತಿನಮಧುರೆಯರು ಜಾತಿ ಮಾಣಿಕದ ಸಮೆಜಾತಿ ಮಾಣಿಕದ ಸಮೆ ತಂದಿಟ್ಟುಜ್ಯೋತಿಗಳ ಹಚ್ಚಿ ಎಡಬಲ 4 ಮಂದಗಮನೆಯರೆಲ್ಲ ಮಿಂದು ಮಡಿಯನುಟ್ಟುಇಂದಿರಾಪತಿಯ ಎಲೆಯಲಿಇಂದಿರಾಪತಿಯ ಎಲೆಯಲಿ ಬಡಿಸೋರುಕುಂದದೆ ಕೊಟ್ಟ ಸೌಭಾಗ್ಯ5 ಬಂದ ಜನರೆಲ್ಲ ಮಿಂದು ಮಡಿಯನುಟ್ಟುಇಂದಿರಾಪತಿಯ ಜೊತೆಯಾಗಿಇಂದಿರಾಪತಿಯ ಜೊತೆಯಾಗಿ ಊಟಕ್ಕೆಬಂದು ಕುಳಿತವರು ಕಡೆಯಿಲ್ಲ 6 ಉಪ್ಪು ಉಪ್ಪಿನಕಾಯಿ ಹಪ್ಪಳ ಸಂಡಿಗೆಒಪ್ಪುವ ಬುತ್ತಿ ಕಲಸನ್ನಒಪ್ಪುವ ಬುತ್ತಿ ಕಲಸನ್ನ ಬಡಿಸೋರುಸುಪ್ಪಾಣಿ ಮುತ್ತು ಉದುರುತ7 ಹೊನ್ನಹರಿವಾಣದಿ ಅನ್ನಭಕ್ಷ್ಯವ ತುಂಬಿಚೆನ್ನರಾಮೇಶನ ಎಡೆಯೊಳುಚೆನ್ನರಾಮೇಶನ ಎಡೆಯೊಳು ಬಡಿಸೋರುರನ್ನ ಮುತ್ತುಗಳು ಉದುರುತ8
--------------
ಗಲಗಲಿಅವ್ವನವರು
ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ ಪ ಅನಂತ ಜನುಮದೊಳೊಂದೆ ಜನುಮಅನಂತ ಕ್ಷಣದೊಳಗೊಂದೆ ಕ್ಷಣಅನಂತ ನಾಮದೊಳೊಂದೇ ನಾಮವಮುನಮುಟ್ಟಿ ನೆನೆದರೆ ಬೆನ್ಹತ್ತಿ ಬಿಡನೈಯ 1 ಅನಂತರೂಪದೊಳೊಂದೆ ರೂಪಅನಂತ ಗುಣದೊಳಗೊಂದೆ ಗುಣಅನಂತ ಜೀವರೊಳಗಾವನಾದರುಂ ಕನಸಿಲಿ ನೆನೆದರೆ ಋಣಿಯಾಗಿಪ್ಪನೈಯ 2 ಒಂದೆ ಹೂವು ಒಂದೆ ಫಲವೊಂದೆಬಿಂದು ಜಲವೊಂದೆ ತುಳಸಿಒಂದೇ ವಂದನೆಯೊಂದೆ ಪ್ರದಕ್ಷಿಣೆಒಂದನರ್ಪಸಿದೊಡಂ ಕುಂದದಾನಂದವೀವನೈ 3 ಹರಿ ಚಿನ್ಹಾಂಕನ ಹರಿದಿನದುಪವಾಸನೆರೆಯೂಧ್ರ್ವ ಪುಂಡ್ರ ತುಳಸಿಮಾಲೆಹರಿಯುತ್ಸವ ಸೇವೆ ಹರಿದಾಸರ ಸಂಗದುರಿತಾಬ್ಧಿಗೆ ಕುಂಭಸಂಭವನಲ್ಲವೆ 4 ಹರಿಪಾದ ತೀರ್ಥವು ಹರಿಯ ನಿರ್ಮಾಲ್ಯವುಹರಿ ಆರತಿ ಧೂಪ ಶೇಷಂಗಳುಹರಿಯ ಪ್ರಸಾದ ಶಂಖೋದಕ ಪ್ರತ್ಯೇಕದುರಿತ ರಾಸಿಗಳನ್ನು ಸೋಕಲು ಸುಡದೆ 5 ಒಮ್ಮೆ ಪಾಡಿದಡಂ ಒಮ್ಮೆ ಪೊಗಳಿದೊಡಂಒಮ್ಮೆ ಬೇಡಿದಡಂ ಒಮ್ಮೆ ನೋಡಿದಡಂಒಮ್ಮೆ ಸಾರಿದಡಂ ಮತ್ತೊಮ್ಮೆ ಕರೆದಡಂನಮ್ಮಾತನಿವನೆಂದು ಕೈಯ ನೀಡುವನೈಯ 6 ತನ್ನಲ್ಲಿಪ್ಪನಾಗಿ ದೂರನಲ್ಲ ನರಹೊನ್ನು ಬೇಡ ಲಕುವಿರಮಣಗೆ ಅನ್ಯವ್ಯಾತಕ್ಕೆ ಈ ಪರಿಪೂರ್ಣಾನಂದಗೆನಿನ್ನವನೆಂದರೆ ತನ್ನನೀವನು ಕೃಷ್ಣ7
--------------
ವ್ಯಾಸರಾಯರು
ಪೂಜೆಯ ನಾನೇನ ಮಾಡುವೆ|ವiಹಾ ರಾಜರಾಜ ಕುರುಣಾನಂದ ಮೂರುತಿ ಹರಿಯೇ ಪ ಧ್ಯಾನಧಾರಣ ಮಂಗಳ ಮೂರ್ತಿಯ ಮಾಡುವೆನೆಂದರೆ| ನಿನ್ನ ಸುಖದ ನೆಲೆಯ ಇಂದಿರಾ ದೇವಿಯರಿಯಳು ಹರಿಯೇ 1 ಶಂಖೋದಕದಿ ಅಭಿಷೇಕ ಮಾಡುವನೆಂದರೆ|ನಿನ್ನಪದ ಪಂಕಜದಲಿ ಭಾಗಿರಥಿ ಬಂದಳೂ ಹರಿಯೇ2 ವಸ್ತ್ರವನುಡಿಸುವೆನೆಂದರೆ ದ್ರೌಪದಿಯವಸರದಿ|ನಿನ್ನಯ ವಸ್ತ್ರದಿಂಡಿನ ಎಣಿಕೆಯ ದೋರದೆನಗೆ ಹರಿಯೇ3 ಗಂಧಪುಷ್ಪವನೀವೆನೆಂದÀರೆ ನಿನ್ನ ಚರಣಾಬ್ಜದಾ|ಮಕ ಭ್ರಮರ ಅಜಭವರಾದರು ಹರಿಯೇ 4 ಆರೋಗಣೆಯ ಮಾಡಿಸುವೆನೆಂದರೆ ನಿನ್ನಕೈಯದಿ|ಸುರರು ಆರೋಗಣೆಯ ಮಾಡಿ ಅಮರರಾದರು ಹರಿಯೇ 5 ನೀರಾಂಜನ ಮಾಡುವನೆಂದರೆ ಕೋಟಿ ಸೂರ್ಯಪ್ರಭೆಯತೇಜ| ಮೀರಿತು ಸ್ತುತಿಗಿನ್ನು ಶ್ರುತಿಗಳು ನಿಂತವು ಹರಿಯೇ6 ಗುರುವರ ಮಹೀಪತಿನಂದನ ಸಾರಥಿ|ನಿನ್ನ ಸ್ಮರಣೆಯ ಕೊಟ್ಟನುದಿನದಿ ರಕ್ಷಿಸುಹರಿಯೇ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಹಿಮೆ ಸಾಲದೆ, ಇಷ್ಟೇ ಮಹಿಮೆ ಸಾಲದೆ ಪ ಅಹಿಶಯನನ ಒಲುಮೆಯಿಂದಮಹಿಯೊಳೆಮ್ಮ ಶ್ರೀಪಾದರಾಯರ ಅ.ಪ ಮುತ್ತಿನ ಕವಚ ಮೇಲ್ಕುಲಾವಿರತ್ನ ಕೆತ್ತಿದ ಕರ್ಣಕುಂಡಲಕಸ್ತೂರಿ ತಿಲಕ ಶ್ರೀಗಂಧ ಲೇಪನವಿಸ್ತರದಿಂದ ಮೆರೆದು ಬರುವ 1 ವಿಪ್ರ ಹತ್ಯ ದೋಷ ಬರಲುಕ್ಷಿಪ್ರ ಶಂಖೋದಕದಿ ಕಳೆಯೆಅಪ್ರಬುದ್ಧರು ದೂಷಿಸೆ ಗೇರೆಣ್ಣೆಕಪ್ಪು ವಸನ ಶುಭ್ರಮಾಡಿದ2 ಹರಿಗೆ ಸಮರ್ಪಿಸಿದ ನಾನಾಪರಿಯ ಶಾಕಗಳನು ಭುಂಜಿಸೆನರರು ನಗಲು ಶ್ರೀಶಕೃಷ್ಣನಕರುಣದಿಂದಲಿ ಹಸಿಯ ತೋರಿದ3
--------------
ವ್ಯಾಸರಾಯರು
ಶ್ರೀಪಾದರಾಜ ಪಾಲಿಸೊ ಕೈಪಿಡಿದೀ ಭವದ ಕೂಪಾರದಿಂದ ದಾಟಿಸೋ ಪ ಕಾಪಾಡೆಲೊ ಕರುಣಾ ಪಯೋನಿಧೆ ಭೂಪಚಂದ್ರ ಗಿರಿ ಪಾಪಗಳನ್ನು ಕಳದಿರುವೆ ಮದ್ಗುರುವೆ ಕರಮುಗಿವೆ ಭಜಕರ ಸುರತರುವೇ ಅ.ಪ ಮೇದಿನಿ ಪಾಲಪೂಜಿತ ವಿದ್ವಜ್ಜನವಿನುತ ಮೇದಿನಿ ಜಾತ ಪ್ರದಾತ ಮೋದಮುನಿಯ ಸುಮತೋದಧಿಚಂದಿರ ವಾದಿ ಮದಗಜ ಮೃಗಾಧಿಪ ಕವಿಜನಗೇಯ ಶುಭ ಕಾಯ ಧೃವರಾಯ ಆಶ್ವರ್ಯ ಚರ್ಯ1 ವಿಪ್ರಹತ್ಯಾದಿ ದೋಷಗಳನ್ನು ಕಳೆಯುವ ಮಹಿಮೆಯನು ಕ್ಷಿಪ್ರ ಶಂಖೋದಕ ಸಂಪ್ರೋಕ್ಷಿಸಿ ಬಲು ಕಪ್ಪುವಸನವನು ಸುಪ್ರಕಾಶಿಸಿದ ಮಹಿಮಾ ಶುಭನಾಮ ಜಿತಕಾಮಾ ಯತೆ ಸಾರ್ವಭೌಮ 2 ವಿಭುದೇಂದ್ರ ಸಹಿತ ಛಾತ್ರಾ ನಿಮ್ಮನ್ನು ಕೇಳಲು ಸೂ- ಸರ್ವಾತಿಶಯದಿಸ- ಮುಖಗೀತಾನಾಮದಿ ಪ್ರಖ್ಯಾತ 3 ಮೃಷ್ಟಾನ್ನ ಕೊಡುವೊ ಮಹಿಮೆಯ ಕೃಷ್ಣಗರ್ಪಿಸಿದ ಪಷ್ಠಿಶಾಕಯುತ ಮೃಷ್ಟಾನ್ನ ದ್ವಿಜ ತುಷ್ಟಿಗೈಸುವಿರಿ ನಿರುತ ಗುಣಭರಿತ ಪ್ರಖ್ಯಾತ ಪಾವನ ತರ ಚರಿತ 4 ಜಗದೊಳು ಸನ್ಮಾನ್ಯ ಚರಿಸಿ ಸತ್ಕರ್ಮವ ಘಳಿಸುವ ಪುಣ್ಯ ಶರಣುಜನಕೆ ಸುರತರುವೆಂದೆನಿಸುತ ಧರೆಯೊಳು ಮೆರೆಯುವ ಶಿರಿಕಾರ್ಪರ ಶುಭನಿಲಯ ಸುರಗೇಯ ಗುರುರಾಯ ನರಹರಿಗತಿ ಪ್ರೀಯ 5
--------------
ಕಾರ್ಪರ ನರಹರಿದಾಸರು