ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದೊಳೆನ್ನನು ನೀ ಪ ಪಡೆದ|ಜಗದೀಶ್ವರಿಯೆ ಅ ಪ ಧರಣಿಯ ಭಾರವನು|| ಶ್ರೀ| ಸರ್ವೇಶ್ವರಿಯೆ 1 ನಂಬಿಹೆ ಶಂಕರಿಯೆ || ಇಂಬುಗೊಡುತ ನೀ| ಬೆಂಬಿಡದೆನ್ನನು 2 ಪಂಕಜಮುಖಿ ಶ್ರೀ| ಶಂಕರಿ ಶುಭಕರಿ| ಕಿಂಕರಪಾಲಿನಿಯೆ || ಬಿಂಕದ ದಾನವ| ಸಂಕುಲವಳಿಸಿದ| ಶಂಖಚಕ್ರಾಂಕಿತೆ | ಶ್ರೀ ದುರ್ಗಾಂಬಿಕೆ 3
--------------
ವೆಂಕಟ್‍ರಾವ್
ದಯದೋರು| ದಯದೋರು | ದಯದೋರು | ಜನನಿ ಪ ಜಯ ಜಗನ್ಮಾತೆ ನೀ | ದಯದೋರಿ ಪೊರೆ ನೀ ಅ.ಪ ಆದಿ ನಾರಾಯಣಿ | ಮಾಧವಭಗಿನಿ || ಸಾಧುಸುಪ್ರೀತೆ ನೀ| ವೇದವಂದಿತೆ ನೀ 1 ಭುವನಪಾಲಿನಿ ದೇವಿ | ಭುವನವಂದಿತೆ ನೀ || ಭವಭಯಹಾರಿಣಿ | ಭುವನೇಶ್ವರಿ ನೀ 2 ಶಂಖಚಕ್ರಾಂಕಿತೆ | ಶಂಕರಿ ಸುಗುಣಿ | ವೆಂಕಟರಮಣನ | ಪ್ರೇಮದ ಭಗಿನಿ 3
--------------
ವೆಂಕಟ್‍ರಾವ್
ಪೊರೆಯುವಳು ದೇವಿ ಪೊರೆಯುವಳು|| ಕರುಣದಿಂದ ನಮ್ಮ ಪೊರೆಯುವಳು ಪ ಶರಣರಿಗೊಲಿದವರಿಷ್ಟವ ಸಲಿಸುವ| ಪರಮಪಾವನೆ ದೇವಿ ಪೊರೆಯುವಳು ಅ ಪ ತೋಷದಿಂದಲವಳಾಶ್ರಿತ ಜನರಭಿ| ಲಾಷೆಯ ಸಲಿಸುತ ಪೊರೆಯುವಳು|| ವಾಸವಾದಿ ಸುರವಂದಿತೆ ಶ್ರೀ ಪರ| ಮೇಶ್ವರಿದೇವಿಯು ಪೊರೆಯುವಳು 1 ಮಹಿಷಾಸುರನನು ಮಹಿಯೊಳು ಕೆಡಹಿದ| ಮಹಿಷಮರ್ದಿನಿದೇವಿ ಪೊರೆಯುವಳು|| ಮಹಿಮೆಯದೋರುತ ಖಳ ಧೂಮ್ರಾಕ್ಷನ| ದಹಿಸುತ ಮಹಿಯನು ಪೊರೆದವಳು 2 ಚಂಡ ಮುಂಡ ಖಳ ತಂಡವಳಿಸಿ ಬ್ರ | ಹ್ಮಾಂಡದ ಭಾರವ ಕಳೆದವಳು|| ರುಂಡವ ತರಿಯುತ ಚೆಂಡಾಡಿದ ಶ್ರೀ| ಚಾಮುಂಡೇಶ್ವರಿ ಪೊರೆಯುವಳು 3 ಭಕ್ತರ ಪೊರೆಯಲು ರಕ್ತಬೀಜಾಖ್ಯನ| ರಕ್ತ ಪಾನÀವನು ಗೈದವಳು|| ಯುಕ್ತಿಯಿಂದಲಾ ನಕ್ತಂಚರನನು| ಶಕ್ತಿಸ್ವರೂಪಿಣಿ ತರಿದವಳು 4 ಶುಂಭ ನಿಶುಂಭರ ವಧಿಸಿದ ಶ್ರೀ ಜಗ| ದಂಬಾದೇವಿಯು ಪೊರೆಯುವಳು|| ಅಂಬುಜಲೋಚನೆ ಶಂಭುಮನೋಹರೆ | ಇಂಬುಗೊಡುತ ನಮ್ಮ ಪೊರೆಯುವಳು 5 ದುರುಳರ ಬಾಧೆಗೆ ಬೆದರುತ ಸುರತತಿ | ಮೊರೆಯಿಡಲಭಯವನಿತ್ತವಳು|| ಅರುಣಾಸುರನ ಸಂಹರಿಸುತ ನಂದಿನಿ| ನದಿಯೊಳು ಶರಣರಿಗೊಲಿದವಳು 6 ಪರಿಪರಿ ವಿಧದಲಿ ಧರಣಿಯ ಭಾರವ ಪರಿಹರಿಸುತಲಿ ಪೊರೆದವಳು|| ಪರಮಕೃಪಾಕರಿ ಶ್ರೀ ಜಗದೀಶ್ವರಿ ಶರಣರಾದ ನಮ್ಮ ಪೊರೆಯುವಳು 7 ಶಂಕರಿ ಶುಭಕರಿ ಕಿಂಕರಪ್ರಿಯಕರಿ|| ಪಂಕಜಲೋಚನೆ ಪೊರೆಯುವಳು|| ಶಂಖಚಕ್ರಾಂಕಿತೆ ಶ್ರೀ ದುರ್ಗಾಂಬಿಕೆ| ಕಿಂಕರರೆಮ್ಮನು ಪೊರೆಯುವಳು 8 ಕೈಟಭಾದಿ ಖಳಸಂಕುಲವಳಿಸಿದ| ನಿಟಿಲಾಂಬಕಿ ಶಿವೆ ಪೊರೆಯುವಳು|| ಜಟಾಮಕುಟ ಸುರತಟನೀಧರಸತಿ| ಕಟಿಲಪುರೇಶ್ವರಿ ಪೊರೆಯುವಳು9
--------------
ವೆಂಕಟ್‍ರಾವ್