ಒಟ್ಟು 15 ಕಡೆಗಳಲ್ಲಿ , 14 ದಾಸರು , 15 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(4) ಚನ್ನಾಕೇಶವ ಶರಣು ಶರಣು ಚೆನ್ನಕೇಶವರಾಯ ಚರಣಗಳೇ ಗತಿ ನಂಬಿದೆ ಜೀಯಾ ಪ ತರಳಧ್ರುವನಿಗಿತ್ತೆಯೊ ಬಹುಶ್ರೇಯ ವರದ ವೇಂಕಟ ಶ್ರೀರಂಗ ಚೆಲ್ವರಾಯಾ ಶರಣ ಶ್ರಿತನಭಯಾ ಆನಂದನಿಲಯಾಅ.ಪ ಅಂದುಗೆ ಗೆಜ್ಜೆಯ ಘಲುಘಲು ತುಂದಿಲನಗೆಮೊಸ ಪೀತಾಂಬರದಿಂ ಧಿಂದಿಮಿಕಿಟ ಕುಣಿಗೋವಿಂದಾ ನಿತ್ಯ ಮುಕುಂದ 1 ಕವಿಕುಲಸ್ತುತ್ಯನೆ ದೇವವರೇಣ್ಯ ಭವಸಾಗರ ತಾರಣ ಪ್ರಾವೀಣ್ಯ ಭುವನಗಳೆಲ್ಲಕು ನೀನೇ ಗಣ್ಯ ಪವಿತ್ರಯೋಗಿಯ ಧ್ಯಾನ ಹಿರಣ್ಯ ಪಾವನ ಪುಣ್ಯ ಶ್ರುತಿ ಪ್ರಾಮಾಣ್ಯ 2 ವಿದುರೋದ್ಭವ ಅಕ್ರೂರ ತ್ರಾತ ಮಧುರ ಬಾಂಧವ ಬದರೀನಾಥ ವಿಧಿ ಪಿತನರನಾರಾಯಣ ಪೂತ ಮಧುಕೈಟಭಾರಿ ಬಹುಪ್ರಖ್ಯಾತ ಬುಧಪ್ರೀತ ಭಾಗ್ಯದಾತ 3 ಒಂದೇ ಅಳತೆಗೆ ಜಗವು ಮೂರಡಿ ಚಂದಿರ ಮುಖಿಮಣಿ ಕೊಟ್ಟನು ಕರಡಿ ನಿಂದೆಯಾ ಕಾಳಿಂಗನ ಮೇಲ್ಗಾರುಡಿ ತಂದೆ ಕರೆದನ ಕರುಣದಿ ಕರಪಿಡಿ ಇಂದೆ ಕಡೆಜನ್ಮಮಾಡಿ ಇಡು ನಿನ್ನಪದದಡಿ4 ಹೆಜ್ಜಾಜೀಶ್ವರ ಶಿವ ಶಂಕರನೆ ಸಜ್ಜನ ಮುನಿಗಣ ಹೃದ್ಭಾಸ್ಕರನೆ ದುರ್ಜನಶಿರಹರ ಶಂಖಚಕ್ರಧರ ವಜ್ರಿ ಅಜಹರಗಾಧಾರ ಧೀರ ಸುಜಯ ಭೂಮ್ಯೋದ್ಧಾರಿ ಜಂiು ಶ್ರೀಕರ 5
--------------
ಶಾಮಶರ್ಮರು
ಉರುಟಣಿಯಾ ಸರಸಿಜನಾಭಾಗ್ಹರುಷದಲಿ ಮಾಡುವೆನಾ ಪ ಶಂಖಚಕ್ರಧರಾ ವೆಂಕಟೇಶ ನಿಮಗೆ | ಕುಂಕುಮ ಹಚ್ಚುವೆ ಪಂಕಜಾಕ್ಷಿ ನಾ 1 ನಂದಗೋಪಿಕಂದ ಹಚ್ಚುವೆ ಗಂಧ ಹಚ್ಚುವೆ ಸುಗಂಧ | ಮುಕುಂದಗೆ 2 ಯಶೋದೆಯ ಬಾಲಾ ಕಾಮಿತಶೀಲಾ ಹಾಕುವೆನು ಮಾಲಾ ಗೋಪಾಲಗೆ 3 ಪೊಡವಿ ಪಾಲಿಪಾ | ಕಡಲಶಯನಾ | ಕೊಡುವೆನು ವಿಡಾ ಪಿಡಿ ಬೇಗನೆ 4 ಪೊಡವಿ ಪಾಲಿಪಾ ಕಡಲಶಯನಾ | ವಂದಿಸಿ ಪ್ರಾರ್ಥನೆಗೈಯುವೆನಾ 5
--------------
ಶಾಮಸುಂದರ ವಿಠಲ
ಕಾಯೊ ಕರುಣಾಕರನೆ ನೀಯನ್ನಾ ಕಾಯೋ ಆನಾಥರಕ್ಷಕ ದಯಾಸಿಂಧೂ ಪ. ಕಾಯೊಯನ್ನನು ಕರವಿಡಿದು ಕೃಪೆಯಿಂದ ನೀಯನ್ನಾ ಕಾಯೊದೇವರದೇವ ಶ್ರೀ ವೆಂಕಟೇಶ್ವರನೆ ಕಾಯೊ ಅ.ಪ. ನೀನಲ್ಲದೆ ಅನ್ಯತ್ರ ತಾಯಿ ತಂದೆಗಳಿಲ್ಲಾ ನೀನಲ್ಲದೆ ಬಂಧುಬಳಗವೆನಗಿಲ್ಲಾ ನೀ ಯನ್ನ ಕಾಯೊ ಶ್ರೀ ವೆಂಕಟೇಶ್ವರನೆ 1 ತರುಳ ಕರಿಯಲು ಕಂಭದಿ ಬಂದು ಹಿರಣ್ಯಾಕ್ಷಕನ ಕರುಳ ತೆಗದು ವನಮಾಲೆ ಹಾಕಿ ನಿಂದೀ ನರಮೃಗರೂಪಿನಲಿ ಪ್ರಹ್ಲಾದಗೆ ವರವಿತ್ತೆ ನೀಯನ್ನ ಕಾಯೊ ಶ್ರೀ ವೆಂಕಟೇಶ್ವರನೆ 2 ಜಲದೊಳಗೆ ನೆಗಳೆಯು ಹಿಡಿದು ಎಳೆಯುತ್ತಿರೆ ಬಹುಬಾಧೆಬಡಿಸೆ ನಿಮ್ಮ ನೆನೆಯಲು ನಿಲ್ಲದೆ ಬಂದೊದಗಿನೆಗಳೆಯನು ಶೀಳ್ದು ಕರಿರಾಜಗೊಲಿದು ರಕ್ಷಿಸಿದೊ ಶ್ರೀ ವೆಂಕಟೇಶ್ವರನೆ 3 ದುರುಳದುಶ್ಯಾಸ ದ್ರೌಪತಿ ಸೀರೆಯನು ಸೆಳೆಯೆ ಹರಿಣಾಕ್ಷಿ ಸಭೆಯೊಳಗೆ ಕೃಷ್ಣಾಯೆಂದುವದರೆ ಪರಿಪರಿ ವಸ್ತ್ರವನು ಕೊಟ್ಟೆ ಅಭಿಮಾನವನು ಕಾಯ್ದೊ ದೇವರದೇವ ಶ್ರೀ ವೆಂಕಟೇಶ್ವರನೆ 4 ಶಂಖಚಕ್ರಧರ ನಿನ್ನ ಚರಣವನು ನಂಬಿದೆ ಪಕ್ಷಿವಾಹನಸ್ವಾಮಿ ಕರುಣಾನಿಧೆ ಹೆಳವನಕಟ್ಟೆಯೊಳು ನಿಂದು ಭಕ್ತರನ್ನೆಲ್ಲಾ ಕಾಯ್ದ ದೇವರದೇವ ಶ್ರೀ ವೆಂಕಟೇಶ್ವರನೆ 5
--------------
ಹೆಳವನಕಟ್ಟೆ ಗಿರಿಯಮ್ಮ
ಕೃಷ್ಣ ಕೃಪಾಲ ಕರುಣಾದಾಯಕ ಕರುಣಾದಾಯಕ ದುಷ್ಟಮರ್ದನ ಶಿಷ್ಟಜನಪಾಲಕ ಧ್ರುವ ಮಾಧವ ಮಧುಸೂದನ ಮಧುಸೂದನ ಪಂಕಜನಾಭ ಪತಿತಪಾವನ ಶಂಖಚಕ್ರಧರ ಸಂಕರುಷಣ ಸಂಕುರಷಣ ಪತಿ ರಾಜೀವನಯನ 1 ಕಸ್ತೂರಿತಿಲಕ ಕೌಸ್ತುಭಭೂಷಣ ಕೌಸ್ತುಭಭೂಷಣ ಮಸ್ತಕ ಮುಗುಟ ಮದನಮೋಹನ ಭಕ್ತವತ್ಸಲ ಹರಿ ನಾರಾಯಣ ನಾರಾಯಣ ವಸ್ತುಪರಾತ್ಪರ ನಿಜನಿರ್ಗುಣ 2 ಗರುಡಗಮನ ಉರಗಶಯನ ಉರಗಶಯನ ಸುರಬ್ರಹ್ಮಾದಿ ವಂದಿತಚರಣ ಕರುಣಾನಂದ ಪರಿಪೂರಣ ಪರಿಪೂರಣ ತರಳ ಮಹಿಪತಿ ಜೀವಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ಜಯ ಜಯ ಸಕಲಾಧಾರಾ | ಕೃಷ್ಣ ಜಯ ಜಯ ಭಕ್ತೋದ್ಧಾರಾ ಜಯಸಕಲಾಲಂಕಾರಾ | ಕೃಷ್ಣಾ ಯಮುನಾ ವೇಗ ಸಂಹಾರಾ ಜಯ ಜಯ ನಂದಕುಮಾರಾ ಕೃಷ್ಣ ಜಯ ಜೀಮೂತ ಶರೀರಾ ಪ ದೇವಕೀಕುಮಾರಾ ನಿಗಮಗೋಚರಾ ಶಂಖಚಕ್ರಧರ ವಸುದೇವಾನಂದಕರ ಸುರುಚಿರ ಪೀತಾಂಬರಧರ 1 ನಯನ ಮನೋಹರ ಗೋಪೀ ಮಂದಿರ ಸರಸಿಜ ದುರುಳ ಭಯಂಕರ ಶಕಟ ಬಕಾಂತಕ ಶೂರಾ ಕೃಷ್ಣ ಪೂತನಿ ಸಂಹಾರಾ ಅಜ ಸುರ ಮುನಿ ಪರಿವಾರ2 ಧೇನುಕ ದೈತ್ಯವಿದಾರಾ | ಕೃಷ್ಣ ಮರಕತ ಮಣಿಮಯ ಹಾರಾ ತರುಣೀ ಮಣಿಗಣನಿಕರಾ | ಕೃಷ್ಣ ಸರಸಿಜಲಸದಾಕಾರಾ ನವನೀತಕರಾ ಘನ ಮುರಳೀಧರ | ಕುಂಜವಿಹಾರಾ ವಿಷಧರ ಭಯಹರ ಗೋವರ್ಧನಧರ | ಮುಷ್ಟಿಕ ಮಧುರಾ 3 ವಿಹಾರಾ | ಕೃಷ್ಣ ನಾದಾನಂದ ಪ್ರಚಾರಾ ಅಕ್ರೂರಾನತ ಚರಣಾ | ಕೃಷ್ಣ ಮುನಿಜನ ಹೃದಯಾಭರಣ ಕುಬ್ಜಾವಂದಿತ ಚರಣ | ಕೃಷ್ಣ ಘನಮಹಿಮಾ ವಿಸ್ತರಣ ಗೋಪೀಜನಗಣ ಮೌಢ್ಯನಿವಾರಣ 4 ದುರುಳ ವಿದಾರಣ | ಭವಜನಕರುಣ ಹಲಧರ ಭುಜಬಲ ಪ್ರಾಣಾ ಕೃಷ್ಣ ಬೃಂದಾರಕಗಣ ಪ್ರಾಣ 5 ಶಿಶುಪಾಲೋತ್ಸವ ಬಾಣಾ | ಕೃಷ್ಣ ರುಕ್ಮ ಲೋಭ ಮದ ಯಾಣಾ ಅರಿಕುಲ ಸೈನ್ಯ ಕೃಪಾಣಾ | ಕೃಷ್ಣ ಚತುರೋಪಾಯ ಪ್ರವೀಣಾ ರುಕ್ಮಿಣೀರಮಣ ಶುಭಕರಕಂಕಣ ಪಾಂಡವಪೋಷಣ ಹರಣ ಚಕ್ರವಿಭೂಷಣ6 ದ್ರುಪದಸುತಾನತಚರಣಾ | ಕೃಷ್ಣ ಪರಮಾನಂದಾವರಣ ವಿದುರಾನತ ನೀಲಾಂಗ | ಕೃಷ್ಣ ಕರಧೃತವ್ಯರಥಾಂಗ ಕುರುಕುಲ ವನ ಸಾರಾಂಗಾ | ಕೃಷ್ಣ ಗೀತಾವನಜತರಂಗಾ ಕಮಲಾ ಅಂಗ | ಸತ್ವ ತುರಂಗಾ | ಧರ್ಮವಿಹಂಗಾ 7 ಮಾಂಗಿರಿ ರಂಗ ಸುಧಾಂಗಾ ಶುಭಾಂಗ | ಜಯ ಜಯ ಮಾಂಗಿರಿ ರಂಗಾ | ಕೃಷ್ಣ ಜಯ ಜಯ ಗರುಡ ತುರಂಗಾ 8
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜೈ ತಿರುಪತಿ ವೆಂಕಟರಮಣ ಕಿಂಕರಜನ ಮಹ ಸಂಕಟಹರ ಜೈ ಪ ಶಂಖಚಕ್ರಧರ ಮಂಕುದಾನವಹರ ಪಂಕಜಪಾಣಿಯಕಳಂಕ ಮಹಿಮ ಜೈ 1 ಸೃಷ್ಟಿಮೇಲೆ ಪ್ರತಿಷ್ಠನಾಗಿ ಮಹ ಬೆಟ್ಟವ ಭೂವೈಕುಂಠವೆನಿಸಿದಿ ಜೈ 2 ತಪ್ಪದೆ ಭಕುತರಿಂ ಕಪ್ಪಗೊಳ್ಳುತ ನೀ ಅಪ್ಪಿಕೊಂಡಿರಿವೀ ಅಪ್ಪ ತಿಮ್ಮಪ್ಪ ಜೈ 3 ಕೋಟಿ ಕೋಟಿ ಮಹತ್ವ ಸಾಟಿಗಾಣದೆ ತೋರಿ ಆಟವಾಡುವಿ ಜಗನಾಟಗಾರನೆ ಜೈ 4 ಕಪ್ಪು ವರ್ಣದಿಂದೊಪ್ಪುವಿ ಸಿರಿಯಿಂ ದಪ್ಪಿಕೋ ದಯದೆನ್ನಪ್ಪ ಮುರಾರಿ ಜೈ 5 ಬೇಡಿದ ವರಗಳ ನೀಡಿದೆ ದಯದಿ ಹರಿ ಗಾಢಮಹಿಮೆ ಇಹ್ಯನಾಡಿಗರುಹಿದಿ ಜೈ 6 ಕೋರಿದವರ ಮನಸಾರ ವರವನೀಡಿ ಧಾರುಣಿಯಾಳಿದ್ಯಪಾರ ಮಹಿಮ ಜೈ 7 ಲಕ್ಷ್ಮೀಸಮೇತನಾಗಿ ಲಕ್ಷ್ಯದಿಂ ಮೂಲೋಕ ಕುಕ್ಷಿಯೋಳ್ ಧರಿಸಿ ನೀ ರಕ್ಷಿಸಿದೆ ಜೈ 8 ಭಕ್ತವತ್ಸಲ ನಿನ್ನ ಭಕ್ತನೆನಿಸಿ ಎನಗೆ ಕರ್ತು ಶ್ರೀರಾಮ ಜೈ 9
--------------
ರಾಮದಾಸರು
ಮಾಮವದೇವ ಮಹಾನುಭಾವ ಶ್ರೀಮನೋಹರ ನಿ ರಾಮಯ ಚಿನ್ಮಯರಾಮ ರಮ್ಯಗುಣಧಾಮ ತಾವಕಂ ಪ ಪಂಕಜನೇತ್ರ ಪರಮಪವಿತ್ರ ಶಂಖಚಕ್ರಧರ ಕಿಂಕರಾರ್ತಿಹರ ಪಂಕಜಾಲಯಾಲಂಕೃತಗಾತ್ರ 1 ನೀಲಾಂಬುದಾಭ ನೀರಜನಾಭ ಬಾಲಭಕ್ತ ಪರಿ ಪಾಲ ಹೇಮಮಯಚೇಲ ನವ್ಯ ವನಮಾಲ ಸುಶೋಭsÀ 2 ಕರುಣಾಲವಾಲ ಖಳಕುಲಕಾಲ ಹರಿಣಹರಣ ಧರ ವರಶಿಖರಾಲಯ ವರದವಿಠಲ ಸುಖಕರಕಮಲಾಲಯ 3
--------------
ವೆಂಕಟವರದಾರ್ಯರು
ಮಾಮವದೇವ-ಮಹಾನುಭಾವ-ಶ್ರೀಮನೋಹರ ನಿರಾಮಯ ಚಿನ್ಮಯ ರಾಮರಮ್ಯ- ಗುಣಧಾಮ ತಾವಕಂಪ ಪಂಕಜನೇತ್ರ ಪರಮ ಪವಿತ್ರ ಶಂಖಚಕ್ರಧರ ಗಾತ್ರ 1 ನಿಲಾಂಬುದಾಭ ನೀರಜನಾಭ ಬಾಲ ಭಕ್ತಪರಿಪಾಲ ಹೇಮಮಯ | ಚೇಲನವ್ಯವನ ಮಾಲ ಸುಶೋಭ 2 ಸುಖಕರ ಕಮಲಾಲಯ 3
--------------
ಸರಗೂರು ವೆಂಕಟವರದಾರ್ಯರು
ಲಕ್ಷ್ಮೀದೇವಿ ಸ್ತೋತ್ರ ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ 1 ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು 2 ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು 3 ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು 4 ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ5 ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು6
--------------
ವೆಂಕಟೇಶವಿಟ್ಠಲ
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ ಭಾಳಲೋಚನ ಭವಹಾರಕಗೆ ಮಂಗಲಂ ಜಯ ಮಂಗಲಂ ಪ ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ ಮಂಗಲಂ ಜಯ ಮಂಗಲಂ 1 ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ ಮಂಗಲಂ ಜಯ ಮಂಗಲಂ 2 ಗಜರಾಜನ ಕಾಯ್ದ ಗೋವಿಂದಗೆ ಅಜಪಿತನಾದ ನಾರಾಯಣಗೆ ಮಂಗಲಂ ಜಯ ಮಂಗಲಂ 3 ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ ರಂಗರಕ್ಷಕ ಮಹಾಬಲೇಶ್ವರಗೆ ಮಂಗಲಂ ಜಯ ಮಂಗಲಂ 4
--------------
ಶಾಂತಿಬಾಯಿ
ಬೇಡುವೆ ನಿನ್ನನು ಜೋಡಿಸಿ ಕರಗಳ |ಕೂಡಲೆ ವರಗಳ | ನೀಡುವದೀಶನೆ ಪನಂದನ ಕಂದ ಮುಕುಂದ ಮುರಾರೆ |ಸುಂದರ ಶುಭಕರ | ಮಂದರೋದ್ಧಾರ 1ಶಂಕರ ಹಿತನೇ ಪಂಕಜನಾಭನೇ |ವೆಂಕಟರಮಣನೆ | ಶಂಖಚಕ್ರಧರನೇ 2ಸುರನರಕಿನ್ನರ| ತುಂಬುರ ನಾರದರ್ |ಪರಿಪರಿಯಲಿ ನಿನ್ನ | ಸ್ಮರಿಸುತಲಿಹರೂ 3ಅಸುರರ ಬಾಧೆಯೊಳ್ | ಸುರರೆಲ್ಲ ಭಜಿಸಲು |ಕುಶಲದಿ ಭಕ್ತರ|ಪೊರೆದೆ | ಗೋವಿಂದನೇ 4
--------------
ಗೋವಿಂದದಾಸ
ಶ್ರೀ ಅಚ್ಯುತಾನಂತ ಗೋವಿಂದ ಸ್ತೋತ್ರ42ಪ್ರೋಚ್ಯಸುಗುಣಾರ್ಣವ ಶ್ರೀಶನಿರ್ದೋಷಅಚ್ಯುತಾನಂತ ಗೋವಿಂದಾಯ ನಮಃ || ಪಪ್ರಾತರುದಿತಾರ್ಕ ನಿಭ ತೇಜಸ್ವಕಾಂತಿಮಾನ್ರತ್ನ ಛವಿ ಜ್ವಲಿಸುವ ಕಿರೀಟಿಯೆ ಶರಣುಪ್ರತತ ಪ್ರಜ್ವಲ ಮಂಡಲೋಪಮ ಕುಂಡಲಗಳುವಿತತ ಮಹಿಮನೆ ನಿನ್ನ ಕಿವಿಯಲಿ ಪೊಳೆಯುತೆ 1ರಾಜರಾಜೇಶ್ವರನೆ ಸರ್ವಾಯುಧೋಪೇತನಿಜಬಲಾಮಿತ ಶಕ್ತ ಚತುರ್ಬಾಹು ಶರಣುಭಜಕರಕ್ಷಕ ಶಂಖಚಕ್ರಧರದೇವನೆತ್ರಿಜಗದೀಶನೆ ವಿಪೋಪರಿಸಂಸ್ಥಸ್ವಾಮಿ2ಅನಂತ ನಿತ್ಯನೆ ನಿನ್ನನ್ನ ಸರ್ವದೇವತೆಗಳುಸನಕಾದಿ ಮುನಿವರರು ಉಪಾಸಿಪರು ಶರಣುಘನವರದ ಅಭಯದನೇ ಸರ್ವ ಲೋಕವಕಾಯ್ವವನಜಭವಪಿತ ನಮೋ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಸಾಯುಧ ಚತುರ್ವಿಂಶತಿ ವಿಷ್ಣುರೂಪ ಸ್ತೋತ್ರ46ಬಲದ ಅಜಾನುಕರ ಮೊದಲು ಪ್ರದಕ್ಷಿಣದಿಸಲಿಲಜಾದಿಧರರಮಾಪತೇ ನಮಸ್ತೇ ಪಅರವಿಂದ -ಶಂಖ ಸುದರ್ಶನ ಕೌಮೋದಕೀಧರನಮೋ ಕೇಶವ ಶ್ರೀಶ ಬ್ರಹ್ಮೇಶ 1ದರಾಂಬುಜಗದಾಚಕ್ರಧರಶ್ರೀಶ ನಮೋನಾರಾಯಣ ದೋಷದೂರಗುಣಪೂರ್ಣ 2ಕೌಮೋದಕೀಚಕ್ರದರಕಮಲಹಸ್ತನೇನಮೋಮಾಧವಲಕ್ಷ್ಮೀರಮಣ ಮಾಂಪಾಹಿ3ಚಕ್ರ ಕೌಮೋದಕೀ ಪ್ರಫುಲ್ಲ ಅರವಿಂದಶಂಖ ಧರ ಗೋವಿಂದ ನಮೋ ವೇದವೇದ್ಯ 4ಗದಾಸರೋರುಹಶಂಖಚಕ್ರಧರವಿಷ್ಣೋಮೋದಮಯ ಸರ್ವತ್ರ ಬಹಿರಂತವ್ರ್ಯಾಪ್ತ 5ಸಹಸ್ರಾರ ಶಂಖಾಬ್ಜ ಗದಾಧರ ನಮಸ್ತೇಪಾಹಿಮಧುಸೂಧನ ಮಹಾರ್ಹ ಹಯಶೀರ್ಷ6ಅಂಬುಜಗದಾಚಕ್ರ ಶಂಖೀ ತ್ರಿವಿಕ್ರಮನೆಪುಷ್ಪಜಾರ್ಚಿತ ತ್ರಿಪದ ನಮೋ ವಿಶ್ವರೂಪ 7ಶಂಖಾರಿ ಕೌಮೋದಕೀ ಪದ್ಮ ಹಸ್ತನೇಮಂಗಳ ಸುಸೌಂದರ್ಯ ವಾಮನ ನಮಸ್ತೇ 8ಇಂದೀವರಾರಿಗದಾಶಂಖೀ ನಮಸ್ತೇಶ್ರೀಧರ ಸದಾ ನಮೋ ಶ್ರೀವತ್ಸಪಾಹಿ9ಗದಾ ಚಕ್ರ ಪದ್ಮಧರಾಹಸ್ತಹೃಷಿಕೇಶಇಂದ್ರಿಯ ನಿಯಾಮಕ ದೇವದೇವೇಶ 10ಶಂಖಾಬ್ಜರಿಗದಾಧರಪದ್ಮನಾಭಅಕಳಂಕ ಮಹಿಮ ಜಗಜ್ಜನ್ಮಾದಿಕರ್ತ 11ಕಮಲಧರ ಕೌಮೋದಕೀ ಚಕ್ರೀ ಈಶದಾಮೋದರ ದೇವ ಸುಜ್ಞಾನದಾತ 12ಕೌಮೋದಕೀ ಶಂಖ ಅಬ್ಜಾರಿಪಾಣಿನ್ಮಮ ಪಾಪಹರ ಸಂಕರ್ಷಣ ಜಯೇಶ 13ಗದಾಶಂಖ ಚಕ್ರಾಬ್ಜಹಸ್ತ ಮಾಯೇಶಸದಾ ನಮೋ ಳಾಳುಕ ಡರಿವಾಸುದೇವ14ರಥಾಂಗಕಂಬುಗದಾ ಕಮಲಧರ ಪ್ರದ್ಯುಮ್ನಕೃತಿದೇವಿರಮಣ ನಮೋ ಭಾಸ್ವ ಮದ್ ಹೃದಯೇ 15ರಥಾಂಗಗದಾಕಂಬುಕಮಲಹಸ್ತನಮೋಶಾಂತೀಶ ಅನಿರುದ್ಧ ಶರಣು ಮಾಂಪಾಹಿ16ಅರಿಕಮಲಶಂಖ ಗದಾಧರ ಪುರುಷೋತ್ತಮಕ್ಷರಾ ಕ್ಷರೋತ್ತಮ ಪೂರುಷ ಸ್ವತಂತ್ರ ನಮೋಪಾಹಿ17ಪದ್ಮ ಗದಾ ಶಂಖಾರಿಧರಅಧೋಕ್ಷಜನಮೋಮೋದಮಯ ಕಪಿಲ ಭಾಮನ ಡರಕವಿಶ್ವ18ಚಕ್ರಾಬ್ಜ ಗದಾ ಶಂಖ ಭಕ್ತ ರಕ್ಷಕ ನಮೋಸದಾನಂದ ಚಿನ್ಮಯಅನಘಅವಿಕಾರಿ19ಅಬ್ಜಾರಿ ಶಂಖ ಗದಾಧರ ಜನಾರ್ಧನ ನಮೋಅಜಿತಅಜಸಂಸಾರ ಬಂಧ ಹರ ಸುಖದಾ20ದರಗದಾಅರಿಅಬ್ಜಧರ ಉಪೇಂದ್ರ ನಮೋಇಂದ್ರಾನುಜನೇ ಬ್ರಹ್ಮ ರುದ್ರಾದಿ ವಂದ್ಯ 21ದರಸುದರ್ಶನಕಮಲಕೌಮೋದಕೀ ಪಿಡಿದಹರಿಶ್ರೀಯಃಪತಿಅಭಯವರದನೇ ಶರಣು22ಶಂಖ ಕೌಮೋದಕೀ ಅಬ್ಜಾರಿಧರ ಕೃಷ್ಣಸುಖಜ್ಞಾನ ಚೇಷ್ಟಾರೂಪನಮೋ ಶ್ರೀಶ23ಮಧ್ವ ಹೃದ್ವನಜಸ್ಥ ಚತುರ್ವಿಂಶತಿರೂಪಉದ್ದಾಮ ಪರಮಾರ್ತಹರಿಶ್ರೀಶ ಶರಣು24ಮತ್ಸ್ಯಕೂರ್ಮಕ್ರೋಡನರಸಿಂಹವಟುರೇಣು-ಕಾತ್ಮಜ ಶ್ರೀರಾಮ ಕೃಷ್ಣ ಶಿಶು ಕಲ್ಕಿ 25ಆನಂದಚಿನ್ಮಯ ಅನಂತ ರೂಪನೇ ನಮೋವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ 26
--------------
ಪ್ರಸನ್ನ ಶ್ರೀನಿವಾಸದಾಸರು
ಹೋಗಿ ನೋಡುವ ಬನ್ನಿರಿ ಶ್ರೀ ಜಗದೀಶನಿಗೆಶ್ರೀನಿವಾಸನ ಸಾಗಿ ನೋಡುವ ಬನ್ನಿ ಬಾಗಿ ಪದ |ನಲಿಸದಿನೀಗಿಭವಕೇರಿದಿಭೋಗಿಶಯನಯೋಗಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಪರಮಭಕ್ತರಪಾಲನಸವ್ಯಸೂಕರಧರಣಿ ಜಯವರನ ||ಕೊರಳೊಳುಕೌಸ್ತುಭಶ್ರೀ ವತ್ಸಲಾಂಛನ |ಕರಿವರ ಭಯನಾಶನ || ಅಘಶೋಷಣ1ಕಾಮಕೋಟಿ ತೇಜನ ಅನಂತ ಜನ ಕಾಮಿತ ಫಲ ಪೂರ್ಣನ |ವಾಮಕರದಿ ಅಕ್ಷಮಾಲಾಧರಸಂಭ್ರಮಪೂರಿತ ಶೀಲನ | ಶ್ರೀ ಲೋಲನ2ವಕ್ಷಸ್ಥಳದಿ ಶಿರಿಯ ಧರಿಸಿಹ ನಿಜ........... |ಮೋಕ್ಷ.................ಲಕ್ಷ ಅಲಕ್ಷ ವಿಲಕ್ಷ ಸುಲಕ್ಷ ನಿಲಕ್ಷ ||ಸಾಕ್ಷೀ ಹರಿಯ ಮುರಾರಿಯ3ನೀಲಮೇಘಶ್ಯಾಮನ ಸುಜನರ ಅನುಕೂಲ ಸರಡಿಗಿವಾಸನ|ಕಾಲಕರ್ಮಾತೀತಕಲಿಮಲಜಲ್ಪ | ನಿರ್ಮೂಲ |ನಾಶನ ಪಾವನ || ಶ್ರೀ ದೇವನ4ಪಂಕಜೋದ್ಭವನಯ್ಯನ ಮುನಿಜನಹೃತ್ಪಂಕಜಆಳ್‍ರೂಪನ ಶಂಖಚಕ್ರಧರಕಟಿಪೀತಾಂಬರಶಂಕರಾಂತರಂಗನ | ಸುಸಂಗನ5
--------------
ಜಕ್ಕಪ್ಪಯ್ಯನವರು