ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರವ್ವಾ ಕೇಳದೀ ಶ್ರೀನಿಧಿಯಾ|ಕಾರುಣ್ಯಂಬುಧಿಯಾ ಪ ಹರಿಯಾ ಸಕಲ ಜಗಧೊರಿಯಾ|| ಸುರಮನಿ ಜನಸಿರಿಯಾ|ಅನಂತಾನಂತ ಚರಿಯಾ| ಕರುಣ ಹೊಕ್ಕಾಕರಿಯಾ| ಕೇಳುತ ಘನ ಮೊರಿಯ ಬಂದೊದಗಿದಧೊರಿಯಾ 1 ಸ್ಮರನಾ ಲಾವಣ್ಯಾ ಮಂದಿರನಾ| ಸಿರಿದೇವಿ ಮನೋಹರನಾ ಪರಕ ಪರಾತ್ಪರನಾ| ಶಂಖಚಕ್ರದ ಕರನಾ| ಸಾರಥಿಯಾದಾ ನರನಾ|ಪೀತಾಂಬರ ಧರನಾ 2 ನಂದಾನಂದನ ಶ್ರೀ ಮುಕುಂದಾ| ದೀನವತ್ಸಲದಿಂದಾ|ಹೊರಿಯಲಯನ್ನದೊಂದಾ| ನೋಡದೇ ಮುನ್ನಿನ ಕುಂದಾ| ಗುರು ಮಹೀಪತಿ ಪ್ರಭುಬಂದಾ ನೀಡಿದಾನಂದಾ|| 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತವತ್ಸಲಭಯನಿವಾರಣ ಭಾಗವತರ ಪ್ರಿಯ ನಿತ್ಯತೃಪ್ತನೆ ನೀರಜನಯನ ಸತ್ಯಭಾಮೆಪತಿ ಸರಸಿಜವದನ ಪ ಮಂಗಳ ಚರಣದಿ ಗಂಗೆಯ ಪಡೆದ ಭು- ಜಂಗನ ತುಳಿದ ಪದಾಂಬುಜಕೆ ನಮೊ1 ವಿನತೆಸುತನ ಹೆಗಲು ಘಮಿಕಿಲಿಂದೇರಿಪ ಕಣಕಾಲಂದಿಗೆಮಣಿಕಾಲಿಗೆ ನಮೊ 2 ಉಟ್ಟ ಪೀತಾಂಬರ ಕಟ್ಟಿದ ಉಡಿದಾ- ತ್ರಿಜಗ ಊರ್ಹೊಟ್ಟೆಗೆ ನಮೊ 3 ನಾಲ್ಕುಮುಖದ ಅಜನಂದನರುದಿಸಿದ ನಾರಾಯಣ ನಾಭಿಕಮಲಕ್ಕೆ ನಮೊ 4 ಕರ್ಣಕುಂಡಲವು ಕಪೋಲದಲ್ಹೊಳೆಯುತ ಸಣ್ಣ ನಾಮದರವಿಂದನೇತ್ರಕೆ ನಮೊ5 ವರ ಶಂಖಚಕ್ರದ ಕರಕÀಮಲಕೆ ನಮೊ 6 ನಾಸಿಕ ಚೆಲುವ ಪ್ರಕಾಶ ಕಿರೀಟ ಭೀ- ಮೇಶಕೃಷ್ಣನ ಮುಖಪದ್ಮಕೆ ನಮೊ 7
--------------
ಹರಪನಹಳ್ಳಿಭೀಮವ್ವ
ಕಂಡೆನಾ ಕನಸಿನಲಿ ಗೋವಿಂದನ ಪಕಂಡೆನಾ ಕನಸಿನಲಿ ಕನಕರತ್ನದ ಮಣಿಯ |ನಂದನ ಕಂದ ಮುಕುಂದನ ಚರಣವ ಅ.ಪಅಂದುಗೆಕಿರುಗೆಜ್ಜೆ ಘಲಿರೆಂಬ ನಾದದಿಬಂದು ಕಾಳಿಂಗನ ಹೆಡೆಯನೇರಿ ||ಧಿಂಧಿಮಿ ಧಿಮಿಕೆಂದು ತಾಳಗಳಿಂದಾನಂದದಿ ಕುಣಿವ ಮುಕುಂದನ ಚರಣವ 1ಉಟ್ಟ ಪೀತಾಂಬರ ಉಡಿಯ ಕಾಂಚಿಯದಾಮತೊಟ್ಟ ಮುತ್ತಿನ ಹಾರ ಕೌಸ್ತುಭವು ||ಕಟ್ಟಿದವೈಜಯಂತಿತುಲಸಿಯ ವನಮಾಲೆಇಟ್ಟ ದ್ವಾದಶನಾಮ ನಿಗಮಗೋಚರನ 2ಕಿರುಬೆರಳಿನ ಮುದ್ರೆಯುಂಗುರ ಮುಂಗಡೆಕರದಲಿ ಕಂಕಣ ನಳಿತೋಳುಗಳ ||ವರಚತುರ್ಭುಜ ಶಂಖಚಕ್ರದಿ ಮೆರೆವನನಿರುತದಿ ಒಪ್ಪುವ ಕರುಣಾ ಮೂರುತಿಯ 3ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲಸಣ್ಣ ನಗೆಯ ನುಡಿ ಸವಿಮಾತಿನ ||ಪುಣ್ಯ ಚರಿತ್ರನ ಪೊಳೆವ ಕಿರೀಟನಕಣ್ಣು ಮನ ತಣಿಯದಕಂಸಾರಿಕೃಷ್ಣನ4ಮಂಗಳ ವರತುಂಗಭದ್ರದಿ ಮೆರೆವನಅಂಗಜಪಿತಶ್ರೀ ಲಕ್ಷ್ಮೀಪತಿಯ ||ಶೃಂಗಾರ ಮೂರುತಿಪುರಂದರವಿಠಲನಕಂಗಳಿಂದಲಿ ಕಂಡೆ ಹಿಂಗಿತು ಭವಭಯ 5
--------------
ಪುರಂದರದಾಸರು