ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂ ಶುಭೋದಯ ಮಂಗಳಂ ಭಯಹರಗೆ ತಿರುಪತಿಯ ವೆಂಕಟೇಶ್ವರಗೆ ಪ ಸುರಲೋಕವನು ಪಡೆದ ಶಿರದಮಕುಟದ ಪ್ರಭೆಗೆ ಸ್ಮರಚಾಪವನು ಪೋಲ್ವ ಪುರ್ಬುಗಳ ಚೆಲುವಿಕೆಗೆ ತುಂಬಿ ತುಳುಕುವ ನಯನಗಳಿಗೆ 1 ಕನಕಕುಂಡಲಗಳಿಗೆ ಘನ ನಾಸಿಕದ ಮಣಿಗೆ ಮಿನುಗುತಿಹ ಮುಗುಳುನಗೆಯೊಗುವ ಮುಖಕೆ ಇನಕೋಟಿಪ್ರಭೆಗೆ ಮಿಗಿಲೆನಿಪ ಕೌಸ್ತುಭಮಣಿಗೆ ವನಮಾಲೆಯನು ಧರಿಸಿ ಶೋಭಿಸುವ ಕಂಠಕೆ 2 ಭುಜವೆರಡರಲಿ ಶಂಖಚಕ್ರಗಳನುರೆ ಧರಿಸಿ ಅಜಸುರಾದ್ಯರು ಬಿಡದೆ ಭಜಿಪ ಪದವ ಭಜಿಪರಿಗೆ ಭವಶರಧಿ ಕಟಿಪ್ರಮಾಣವಿದೆಂದು ಅಜಪಿತನು ತೋರುತಿಹ ಕರಚತುಷ್ಟಯಕೆ 3 ಹದಿನಾಲ್ಕು ಲೋಕಕಾಶ್ರಯವಾಗಿ ತೋರುತಿಹ ಪದುಮಭವನನು ಪಡೆದ ನಾಭಿಸಹಿತ ಉದರಮಂಡಲಕೆ ಮತ್ತದರಡಿಯ ಶೋಭಿಸುವ ಹದಿನಾರು ಬಣ್ಣದಪರಂಜಿ ಕಟಿಸೂತ್ರಕೆ 4 ಕಿರಿಘಂಟೆಸರದೊಡನೆ ಹೊಳೆವ ಪೀತಾಂಬರಕೆ ಗರುಡನಂಸದಿ ಮೆರೆವ ಊರುಗಳಿಗೆ ಸುರನದಿಯ ನೆರೆ ಪಡೆದ ಚರಣದುಂಗುಟಗಳಿಗೆತಿರುಪತಿಯ ವೆಂಕಟನ ದಿವ್ಯ ಮೂರುತಿಗೆ 5
--------------
ತಿಮ್ಮಪ್ಪದಾಸರು
ಪಾವನಾತ್ಮಕಿಯೆ | ಪಾಲಿಸು | ಪಾವನಾತ್ಮಕಿಯೆ ಪ ಭಾವಜಾರಿಹಿತೆ ಸುಪ್ರೀತೆ|| ದೇವಿಪಾವನೆ ಪಾಲಿಸು ಮಾತೆ ಅ ಪ ಸೃಷ್ಟಿ ಭಾರರಾಗುತಿರ್ದ| ದುಷ್ಟ ದನುಜರಸುವ ಹೀರ್ದ|| ಶಿಷ್ಟರಿಂಗೆ ದಯವದೋರ್ದ| ಸೃಷ್ಟವಿನುತೆ ಶಿಷ್ಟದಾತೆ 1 ವೇದವಿನುತೆ ಭೇದರಹಿತೆ| ಸಾಧುಸುಜನಮೋದದಾತೆ|| ಆದಿಮಧ್ಯಾಂತರಹಿತೆ| ಮಾಧವನ ಸಹಜಾತೆ 2 ಶಂಖಚಕ್ರಗಳನು ಧರಿಸಿ| ಬಿಂಕದ ಸುರರನ್ನು ವಧಿಸಿ|| ಸೋದರಿ ಶಂಕರಿ3
--------------
ವೆಂಕಟ್‍ರಾವ್
ಶ್ರೀ ಹರಿ ಪಾಲಿಪುದೈ ದಾಸನಾಗಿ ಸೇವೆಗೈವುದ ಪ ನೀನು ಕೂಡುವ ಪೀಠವಾಗಿ ಮಲಗಲು ಹಾಸಿಗೆಯಾಗಿ ನಾನು ಎದುರ ಕನ್ನಡಿಯಾಗುತ ಮಂಗಳದೀಪ ಪಿಡಿವೆನೈ 1 ನಿನ್ನ ಮೇಲಿನ ಛತ್ರಿಯಾಗಿ ಚಾಮರಹಿಡಿದು ಬೀಸುವೆನೈ ಚನ್ನವೈಜಯಂತಿಮಾಲೆ ಧನ್ಯ ಮುದ್ರಿಕೆಯನ್ನು ಮಾಡಿಕೊ 2 ಭೋಜನಪಾತ್ರ ತಾಂಬೂಲಭರಣಿ ರಾಜಿಪ ಫಲತಟ್ಟೆಯು ಆಗಿ ವಿಜಯಧ್ವಜವನಾಗಿಸೈ 3 ಬರೆದು ಓದುವ ಪತ್ರವಾಗಿ ಕೈಯ ಲೀಲಾಶುಕವಾಗೀ ಕೊರಳ ಕೌಸ್ತುಭಮಣಿಯಮಾಡಿ ಶಂಖಚಕ್ರಗಳನು ಹೊರಿಸು 4 ಜಾಜಿಕೇಶವ ದಿವ್ಯಸನ್ನಿಧಿ ಸಾಹ್ಯವಸ್ತುಗಳಾಗಿಸೈ ರಾಜಾಧಿರಾಜಪೂಜ್ಯ ಮಾಜದೆ ನಾಂ ಮಣಿವೆ ಬೇಡಿ5
--------------
ಶಾಮಶರ್ಮರು