ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವಾಚ್ಯುತ ಮಾಧವಾನಂತ|ಶ್ರೀ ಶಕಮಲದಳೇಕ್ಷಣಾ| ವಾಸುದೇವ ಮುಕುಂದ ಮುರಹರ ಕ್ಲೇಶಹರಣ ಜನಾರ್ಧನಾ|| ವಾಸುಕಿಯ ಪರಿಯಂಕನೆನುತಲಿ|ನೆನೆವನಾವ ನರೋತ್ತಮಾ| ಮೋಸಹೋಗದಿರವರೊಳೆಂದು|ಚರರಿಗ್ಹೇಳಿದನೈಯಮಾ 1 ರಾಮರಾಘವ ರಾಜಶೇಖರ|ರಾವಣಾಸುರಮರ್ದನಾ| ಶಾಮಸುಂದರ ಸಕಲ ಗುಣನಿಧಿ|ಶಬರಿಪೂರಿತ ವಾಸನಾ ಭೂಮಿಜಾಪತಿ ಭೂತನಾಥ|ಪ್ರಿಯನೆಂಬ ನರೋತ್ತಮಾ| ಪ್ರೇಮಿಕನ ನುಡಿಸದಿರಿಯೆಂದು|ಚರರಿಗ್ಹೇಳಿದನೈಯಮಾ 2 ಬಾಲಲೀಲವಿನೋದ ಶ್ರೀ ಗೋಪಾಲ ಗೋಕುಲ ಲಾಲನಾ| ಕಾಲಜಲಧರ ನೀಲಮುರಲೀ ಲೋಲಸುರವರ ಪಾಲನಾ| ಕಾಲಕಾಲನೆ ಕಂಸಹರನನು ತಾವ ನೆನೆವ ನರೋತ್ತುಮಾ| ಕಾಲಿಗೆರಗಿರಿ ಅವರಿಗೆಂದು|ಚರರಿಗ್ಹೇಳಿದನೈಯಮಾ 3 ಮಕರಕುಂಡಲ ಕಿರೀಟ ಕೌಸ್ತುಭ|ಕಟಕಕೇಯೂರ ಭೂಷಣಾ| ಅಖಿಲ ಜಗನುತ ಚರಣಪೀತಾಂಬರನೆ ಶ್ರೀವತ್ಸಲಾಂಭನಾ| ಪ್ರಕಟಿತಾಯುಧ ಶಂಖಚಕ್ರಗದಾಬ್ಜ ನೆನೆವನರೋತ್ತಮಾ| ಸುಖಿಸುವವರನು ತ್ಯಜಿಸಿರೆಂದು ಚರರಿಗ್ಹೇಳಿದನೈಯಮಾ 4 ಶ್ರವಣಪೂಜನೆ ಸ್ಮರಣಕೀರ್ತನೆ ವಂದನೆದಾಸ್ಯದಿ ಸಖ್ಯವಾ| ಬಿಡದನಾವನರೋತ್ತುಮಾ| ಅವನ ಸೀಮೆಯ ಹೋಗದಿರೆಂದು ಚರರಿಗ್ಹೇಳಿದನೈಯಮಾ 5 ಯಾರಮನೆಯಲಿ ತುಲಸಿವೃಂದಾವನದಿ ಶಾಲಿಗ್ರಾಮವು| ಚಾರುದ್ವಾದಶನಾಮ ಹರಿಚಕ್ರಾಂಕಿತದ ಶುಭಕಾಯವು| ಮೀರದಲೆ ಹರಿದಿನದ ವ್ರತದಲಿ ನಡೆವನಾವನರೋತ್ತಮಾ| ದಾರಿ ಮೆಟ್ಟದಿರೆಂದು ತನ್ನಯ ಚರರಿಗ್ಹೇಳಿದನೈಯಮಾ 6 ಸಾಧುಸಂತರು ಬಂದರೆರಗುತ ಪಾದೋದಕದಲಿ ಮೀವನು| ಆದಿನವಯುಗ ವಾದಿಚತುರ್ದಶ ಪರ್ವಕಾಲಗಳೆಂಬನು| ಸಾದರದಿ ಹರಿಪೂಜೆಯಿಂದರ್ಚಿಸುವ ನಾವನರೋತ್ತಮಾ| ಮೋದದಿಂದಲಿ ಬಾಗಿರೆಂದು ಚರರಿಗ್ಹೇಳಿದನೈಯಮಾ 7 ಅಂದು ಹೇಳಿದ ಕಥೆ ರಹಸ್ಯದ ಹರಿಯನಾಮದ ಮಾಲಿಕಾ| ತಂದೆ ಮಹೀಪತಿ ಎನ್ನ ಮುಖದಲಿ ನುಡಿಸಿದನು ಭೋಧಾಷ್ಟಕ| ತಂದು ಮನದಲಿ ಭಕುತಿಯಿಂದಲಿ ನೆನೆವನಾವನರೋತ್ತಮಾ| ಇಂದು ಜೀವನ್ಮುಕ್ತನಮಗಿನ್ನೇನು ಮಾಡುವನೈಯಮಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜೋಜೋ ಪದುಮದಳಾಕ್ಷ ಉಪೇಂದ್ರ ಪ ಜೋಜೋ ವೇದವಂದಿತ ನಿತ್ಯಾನಂದ | ಜೋಜೋ ಆದಿಮೂರುತಿ ಶ್ರೀಗೋವಿಂದ ಅ.ಪ ಉದಿಸಿದೆ ವಸುದೇವನರಸಿಯೊಳಂದು 1 ದೇವ ರೋಹಿಣಿ ನಕ್ಷತ್ರದೊಳು ಧರೆಗಿಳಿದೆ 2 ಕೌಸ್ತುಭ ಸಕಲ ಲೋಕೇಶ ಶೋಭಿಸುವೆ ಸಂಭ್ರಮದಿ3 ಪರಿಪರಿ ಶೋಭಿಸಿ ಮೆರೆವೆ ಆನಂದ 4 ಲೀಲಾವಿನೋದವ ಮಾಳ್ಪೆ ಸಂತಸದಿ 5 ಒಂದಾಗಿ ಸುಮವೃಷ್ಟಿ ಸುರಿವ ಸಂಭ್ರಮದಿ 6 ನಾರದ ಮುನಿಪನ ವೀಣಾಗಾನಗಳು | ನಾರಿ ಲಕ್ಷ್ಮಿಯು ರತ್ನದಾರತಿಯೆತ್ತುವಳು 7 ಗಿರಿಜೇಶಪ್ರಿಯನೆ ತ್ರೈಜಗದುದ್ಧಾರಿ8 ತ್ರುವಿತ್ರುವಿ ಶಂಖಚಕ್ರಗದಾಪದ್ಮ ಹಸ್ತ 9 ತ್ರುವಿತ್ರುವಿ ಪರತರ ಪಾವನರಾಮ 10 ನಂತರ್ಯದೊಳಗಿಟ್ಟು ಪೊರೆವೆನಿನ್ನೇನು 11 ಗುರು ದಾಮೋದರ ಶ್ರೀನಿವಾಸ ಆಗಿರುವೆ 12
--------------
ಸದಾನಂದರು
ಹರಿ ಹರಿ ನರಹರಿ ಎನ್ನಿಜನರು ಹರಿ ಹರಿ ಎಂದು ಕೊಂಡಾಡಿ ಸಜ್ಜನರು ಪ ನಂದನಂದನನಾ ಮಂದರಧರನಾ ಇಂದ್ರಾದಿ ಸನಕ ಸನಂದನ ವಂದಿತನಾ 1 ತಾಳಭಂಜನನಾ ವ್ಯಾಳಶಯನನÀ ಕಾಳಿಯ ಪೆಡೆಯ ಮೇಳ್ ಕುಣಿದ ಗೋವಳನ 2 ಶರಧಿ ಶಯನನ ವರ ಶಂಖಚಕ್ರಗದಾಬ್ಜ ಶ್ರೀಧರನ 3 ಮಾವ ಮರ್ದನನ ರಾವಣಾಂತಕನ ಗೋವರ್ಧನವನೆತ್ತಿ ಗೋವಕಾಯ್ದವನ 4 ಮಕರ ಕುಂಡಲನ ಮುಕುತಿದಾಯಕನ ಬಕನ ವೈರಿಯ ಕೋಣೆ ಲಕ್ಷ್ಮೀ ರಮಣನ 5
--------------
ಕವಿ ಪರಮದೇವದಾಸರು
ಬಾರೋ ಬಾ ಮನೆಗೇ ರಂಗಯ್ಯ ನೀ |ತೋರೋ ಮುಖವೆನಗೆ ಪಘೋರಶರೀರ ಸುಂ |ದರಸೂಕ್ಷ್ಮಾಕಾರನೆ |ಕ್ರೂರ ದಯಾಕರ ಧೀರ ಉದಾರಿಯೆ ಅ.ಪನೀಲಮೇಘ ಶ್ಯಾಮ ನಿರ್ಮಲವನ | ಮಾಲ ಪೂರ್ಣಕಾಮ |ಕಾಲಭಯ ವಿದೂರ | ಫಾಳನೇತ್ರನಮಿತ್ರ|ಪಾಲಾಬ್ಧಿವಾಸ ಶ್ರೀಲೋಲ ಗೋಪಾಲನೇ 1ಶೇಷಶಯನ ದೇವಾ | ಭಕ್ತರಭವ|ದೋಷಹರ ಸಂಜೀವಾ |ನಾಶರಹಿತ ಸರ್ವ | ಆಶವಿನಾಶನ |ಭಾಸುರಾಂಗನೆ ಜಗ | ದೀಶ ಕೇಶವಮೂರ್ತಿ 2ಕಾಲೊಳಂದುಗೆಯೂ | ಪೀತಾಂಬರ |ಶಾಲುಮುದ್ರಿಕೆಯೂ | ತೋಳ ಸರಿಗೆ ಬಳೆ |ವೈಜಯಂತಿಯ ಮಾಲೇ ಮೇಲಾದರತ್ನಕಿರೀಟಕುಂಡಲಧಾರೀ | ಗರುಡನ ಏರಿ 3ಶಂಕೆಯಿಲ್ಲದ ಭಕ್ತರೂ | ನಿನ್ನಯ ಸದೃ-ಶಾಂಕದಿ ಸೇವಿಪರೂ | ಶಂಖಚಕ್ರಗದಾ |ಪದ್ಮವ ಧರಿಸಿದ | ಪಂಕಜನೇತ್ರವೈ- |ಕುಂಠ ವೆಂಕಟಪತೇ 4ಧಾರುಣಿ ಭಾರವನೇ | ಇಳುಹಲವ |ತಾರಗಳೆತ್ತುವನೆ |ಚಾರುಭುಜಾನ್ವಿತ |ಕೌಸ್ತುಭಮಣಿಹಾರ | ವಾರಿಜನಾx
--------------
ಗೋವಿಂದದಾಸ
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು