ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ ಪ ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿಮನಸಿಜನೊಡೆಯನೆ ಕನಕಗರ್ಭನ ಜನಕ ಅ ಮಚ್ಚ್ಯಾವತಾರ ನೀನಾದರೆ - ಆಕೆಮಚ್ಚ್ಯಗಂಗಳೆ ತಾನಾದಳೊಹೆಚ್ಚಿನ ಶಂಖವ ಪಿಡಿದರೆ - ಆಕೆನಿಚ್ಚ ಶಂಖಕಂಠಳಾದಳಯ್ಯ 1 ನೀಲವರ್ಣ ನೀನಾದರೆ - ಆಕೆನೀಲಕುಂತಳೆ ತಾನಾದಳೊಲೋಲ ಕಮಲನಾಭನಾದರೆ - ಆಕೆಬಾಲ ಕಮಲಮುಖಿಯಾದಳಯ್ಯ2 ಬೆಟ್ಟವ ನೀನೊಂದು ಪೊತ್ತರೆ - ಆಕೆಬೆಟ್ಟದಂಥ ಕುಚವೆರಡು ಪೊತ್ತಳೊಮೆಟ್ಟಿ ಶೇಷನ ನೀ ತುಳಿದರೆ - ಆಕೆಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ3 ಗಜರಾಜವರದ ನೀನಾದರೆ - ಆಕೆಗಜಗಮನೆಯು ತಾನಾದಳಯ್ಯನಿಜ ನರಸಿಂಹ ನೀನಾದರೆ - ಆಕೆಭಜಿಸಿ ಸಿಂಹಮಧ್ಯೆಯಾದಳಯ್ಯ 4 ಈ ಪರಿಯೊಳು ನೀನು ಜನಿಸಿದೆ - ಭಲೆಭಾಪುರೆ ಬಾಡದೊಳು ನೆಲೆಸಿದೆಗೋಪಿಯರ ಮೋಹ ಸಲಿಸಿದೆ - ಚೆಲುವಶ್ರೀಪತಿ ಆದಿಕೇಶವರಾಯ ಮೆರೆದೆ5
--------------
ಕನಕದಾಸ