ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ
ಸಾನು ರಾಗದಿ ಹರಿಯ ಸೇವಿಸುತಲಿರುವಿ ಪ.
ಕಂಕಣವು ನೀನಾಗಿ ಹರಿಗೆ ಭುಜಕೀರ್ತಿ ನೀನಾಗಿ
ಶಂಕುಚಕ್ರ ಗದಾ ಪದ್ಮ ನೀನಾಗಿ ಶಂಕೆ ಇಲ್ಲದೆ
ಕಿಂಕರಳು ನೀನಾಗಿ ಹರಿಸೇವೆಗೆ
ಪಂಕಜಾನಾಭನ್ನ ಸೇವಿಸುತಲಿರುವಿ 1
ಅಕ್ಷರಳು ನೀನಾಗಿ ಹರಿಯ ವಕ್ಷಸ್ಥಳವನೇ ಸೇರಿ
ಈ ಜುತ ಹರಿಯ ಪರಮ ಸಂತೋಷದಿಂದ
ಲಕ್ಷ ಕೋಟಿ ಕೋಟಿ ಬ್ರಹ್ಮಾಂಡರೂಪದಲ್ಲಿರುವ
ಪಕ್ಷಿವಾಹನನ ನೋಡಿ ವೆರಗಾಗುತಲಿರುವಿ 2
ರಾಮನಾ ಸತಿಯಾಗಿ ಪ್ರೇಮದಿಂದಲಿ ಈಗ
ಕಾಮನಯ್ಯನ ಕಾರುಣ್ಯದಿಂದ
ರಮಾವಲ್ಲಭವಿಠಲನ ತೊಡೆಯ ಮೇಲೆ ಕುಳಿತು
ಸ್ವಾಮಿಗೆ ಸತಿಯಾಗಿ ಸೇವಿಸುತಲಿರುವಿ 3