ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಡಿದಿಹ ಕುಸುಮವ ಸಡಗರದಲಿ ನೀಡೆ ಮಡದಿ ತುಳಸಿ ಎನಗೆ ಕಡುದಯದಿಂದ ಪ. ಕಂಕಣ ಕಡಗವು ವಂಕಿ ಬಳೆಯನಿಟ್ಟು ಪಂಕಜಕರದಿಂದ ಶಂಕಿಸದಲೆ ಎನಗೆ 1 ಕುಸುಮ ಭವ ಶ್ರೀ ರಮೇಶನ ತೋರಿ 2 ತುಷ್ಟಳಾಗಿ ನೀಡೆ ಅಷ್ಟು ವಿಧದ ಕುಸುಮಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠಲನ ಸತಿ3
--------------
ಅಂಬಾಬಾಯಿ
ಸತ್ಯ ಸಂಕಲ್ಪ ನೀನಹುದೆಲೊ ಜಗದೊಳು ಭೃತ್ಯವತ್ಸಲ ಹರಿಯೆ ಪ. ನಿತ್ಯ ತೃಪ್ತನೆ ವ್ಯಾಪ್ತ ಜಗದಿ ಹರಿಯೆ ದೊರೆಯೆ ಅ.ಪ. ಜನನ ಮರಣ ವಿದೂರನೆ ದೇವಕಿ ತನಯ ರುಕ್ಮಿಣೀಶ ಘನಭವ ವನಧಿಯ ದಾಟಿಸಿ ಸಲಹೋ ವನಜ ನಯನ ದೇವ ಸತತದಿ 1 ಕಮಲಾಕ್ಷ ಕಮಲೇಶ ಕಮಲಪಾಣಿ ಪದ ಕಮಲವೆನಗೆ ತೋರೊ ಕಮಲನಾಭ ಹೃತ್ಕಮಲದಿ ನಿಲ್ಲೊ ಕಮಲಮುಖನೆ ದೇವ ಶ್ರೀಹರಿ 2 ಭಕ್ತಕಮಲ ಬಂಧು ವ್ಯಾಪ್ತ ದಯಾಸಿಂಧು ಉತ್ತಮನೆ ನೀನೆಂದು ಎತ್ತ ನೋಡಲು ಸುರರೆತ್ತಿ ಕೈ ಪೊಗಳಲು ಮತ್ತೆ ನಿನಗೆ ಸರಿಯೆ ಜಗದೊಳು 3 ಶ್ರೀನಿವಾಸನೆ ಕಾಯೊ ಮಾನನಿಧಿಯೆ ಎನ್ನ ಹೀನ ಕರ್ಮವ ಕಳೆಯೊ ಶ್ರೀನಿಧಿ ದ್ರೌಪದಿ ಮಾನ ಕಾಯ್ದನೆ ಗಾನಲೋಲ ಕೃಷ್ಣ ನರಹರಿ 4 ಸಂಕರ್ಷಣನೆ ಮನ ಪಂಕಜದಲಿ ನಿಂತು ಶಂಕಿಸದಲೆ ಕಾಯೊ ಪಂಕಜಮುಖ ಹರಿ ಗೋಪಾ- ಲಕೃಷ್ಣವಿಠ್ಠಲ ಶಂಖ ಚಕ್ರಧರನೆ ಪೊರೆಯೊ ನೀ5
--------------
ಅಂಬಾಬಾಯಿ