ಗಿರಿರಾಜಕುಮಾರಿ ದೇವಿಪರಮ ಮಂಗಳಗೌರಿಪರಮ ಪಾವನೆ ಶ್ರೀಹರಿ ಸೋದರಿಸುರರಿಪು ಮಧುಕೈಟಭ ಸಂಹಾರಿಶ್ರೀಕರಿ ಗೌರಿ ಹಸೆಗೇಳು ಹಸೆಗೇಳು 1
ಕುಂಭಸಂಭವವಿನುತೆ ದೇವೀಶಾಂಭವಿ ಶುಭಚರಿತೆಜಂಭಭೇದಿ ಮುಖ ಸುರವರಪೂಜಿತೆಕಂಬುಕಂಠಿ ಶುಭಗುಣಗಣ ಶೋಭಿತೆಲೋಕೈಕಮಾತೆಹಸೆ2
ಸರಸಿಜದಳನಯನೆ ದೇವಿಸರಸಕುಂದರದನೆಸರ್ವಮಂಗಳೆ ಸರ್ವಾಭರಣೆಸುರಮುನಿ ಪರಿಭಾವಿತೆ ಶುಭಚರಣೆಕರಿರಾಜಗಮನೆ ಹಸೆ 3
ನಿರ್ಜರ ಪರಿವಾರೆಮಣಿಮಯಹಾರೆ ಹಸೆ4
ಪನ್ನಗನಾಭವೇಣಿ ದೇವಿಸುನ್ನತೆ ರುದ್ರಾಣಿ ಕನ್ನಡಿಗದಪಿನ ಶಿವೆ ಶರ್ವಾಣಿಲೋಕೈಕ ಜನನಿ ಹಸೆ 5
ಶುಭ ಲೀಲೆಮೃಗಮದ ತಿಲಕ ವಿರಾಜಿತೆ ಪಾಲೆಕುಂಕುಮನಿಟಿಲೆ ಹಸೆ 6
ಪಂಕಜ ಸಮಪಾಣಿ ಶ್ರೀ ಹರಿ-ಣಾಂಕವದನೆ ವಾಣಿಅಂಕಿತಮಣಿಗಣ ಭೂಷಣ ಭೂಷಣಿಶಂಕರೀ ಕೆಳದಿಪುರವಾಸಿನಿಪಾರ್ವತಿ ಕಲ್ಯಾಣಿ ಹಸೆ 7