ಭೂರಿಜಗದುದ್ಧಾರೆ ಲೋಕವಿ-|
ಸಾರೆ ಸರ್ವಾಧಾರೆ ಲೋಕವಿ-|
ಚಾರೆ ನಿನ್ನಡಿದಾವರೆಗೆ ನಾ ಅ.ಪ
ಚಂಡಿಕೆ ಗಿರಿಜಾತೆ ||
ದಿಂಡುಗೆಡಹುತ ರುಂಡಗಳ ಚೆಂ-|
ಡಾಡಿ ರಕ್ತವನುಂಡ ಶಂಕರಿ1
ಕೌಮಾರಿ ಗೌರಿ ರುದ್ರಾಣಿ ||
ಕಾಮಹರ ಸುಪ್ರೀ(ಯೆ) ತ್ರಿಜಗ-|
(ವಾಮೆ) ಪೊರೆ ಬ್ರಹ್ಮಾಂಡ ನಾಯಕಿ 2
ನಾದ ಬಿಂದು ಕಲಾದಿಮಯ(ಳೆ) ವಿ-|
ಧ್ಯಾಂತರಹಿತೆ ಸದಾನಂದೋದ್ಧರೆ 3