ಆರತಿ
ನಿತ್ಯ ಕಲ್ಯಾಣಿ ಪರಶಿವೆಗೆ ||
ಅತ್ಯುತ್ತಮ ನವರತ್ನದಿ ಕೆತ್ತಿದ | ಮುತ್ತಿನ ಆರತಿ ಬೆಳಗುವೆನು ||
ದೇವಿಗಾರತಿಯ ಬೆಳಗುವೆನು 1
ಗಂಧ ಕತ್ತುರಿ ಪರಿಮಳದಿ ||
ಕುಂದಣದಾರತಿ ಬೆಳಗುವೆನು ||
ದೇವಿಗಾರತಿಯ ಬೆಳಗುವೆನು 2
ಪರಿಪರಿ ಸುಮದಲಿ ಶೃಂಗರಿಸಿ ||
ವರ ಸುಮದಾರತಿ ಬೆಳಗುವೆನು ||
ದೇವಿಗಾರತಿಯ ಬೆಳಗುವೆನು 3
ಮಂಗಳ ಗೌರಿ ಕೃಪಾಕರಿಗೆ | ಮಂಗಳದಾಯಕಿ ಶಂಕರಿಗೆ ||
ಮಂಗಳಾರತಿಯ ಬೆಳಗುವೆನು ||
ದೇವಿಗಾರತಿಯ ಬೆಳಗುವೆನು4