ಇದÉೀ ಸೌಖ್ಯ ತಾಣ ತಿಳೀ ನೀನೆ ಜಾಣಾ ಪ
ಶರೀರಾದಿ ಸಂಘಾತವೆಲ್ಲ ವಿಕಾರಿ
ಬರೀ ತೋರಿಕೆ ಸ್ವಪ್ನವೇ ಕೇಳ್ ವಿಚಾರಿ
ಅರೀ ನೀ ಸ್ವರೂಪಾ ಶರೀರಾದಿ ಭಿನ್ನ 1
ಸದಾ ನಿರ್ವಿಕಾರ ಪರಾನಂದಸಾರ
ಜಾಗರ ಸ್ವಪ್ನ ನಿದ್ರಾದಿ ದೂರ
ಅದೇ ನೀ ಇದೇ ಕೇಳ್ ಸ್ವರೂಪಾತ್ಮಜ್ಞಾನ 2
ತಿಳೀ ನಿನ್ನ ನೀ ಈ ವಿಚಾರಾಕ್ಷಿಯಿಂದೆ
ಇದೇ ಮೋಕ್ಷವೆಂದ ಸ್ವರೂಪಾನಂದ
ಇದೇ ಶಂಕರಾರ್ಯಾ ನಿಜಾನಂದವೆಂದ 3