ಚೈತನ್ಯವೊಂದೆ ಸತ್ಯ ಈ ಜಗವೆಲ್ಲ ಭ್ರಾಂತಿ ಮಿಥ್ಯ
ಅನಿಸುವಿಕೆ ಇಲ್ಲದಿರುವಾ ಮನವಾಣಿ ಮೀರುತಿರುವಾ
ಘನವಾದ ಸ್ವಪ್ರಭಾವ ಅದೆ ನೋಡು ಆತ್ಮಭಾವಾ 1
ನಿಜವಾದ ಚೇತನವದು ಅಜರಾಮರಾಗಿರುವದು
ಅದೆ ನೀನು ಎಂದು ತಿಳಿಯೈ ಇದು ಎಲ್ಲ ಕನಸುಮಿಥ್ಯ 2
ಇದು ನೋಡು ಶಾಸ್ತ್ರಸಾರಾ ಇದನರಿತ ಮನುಜ ಧೀರ
ಇದನೊಂದೆ ತಿಳಿದುಕೊಳ್ಳೈ ಇದು ಶಂಕರಾರ್ಯಬೋಧ 3