ಈ ದೇಹಾಭಿಮಾನವೇ
ಸಂಸಾರಮೂಲವಯ್ಯ ಕೇಳೀಗಲೇ ಜ್ಞಾನದಿಂದಾ
ನೀ ದೂಡನಿನ್ನಭಿಮಾನ
ವಿಷಯಾಭಿಲÁಷಾ ಮನದಲ್ಲಿ ಮೂಡಿ
ಜೀವಂಗೆ ಗುಣದಲ್ಲಿ ಅನುರಾಗ ಕೂಡಿ
ಇದೇ ಭೋಗನೇ ಮುಂದೆ ಸುಖದುಃಖವಾಗಿ
ಜನುಮಕ್ಕೆ ಮೂಲಾದಿದೇ ವಾಸನಾಳಿ ಇದೇ ವಾಸನಾಳಿ
ಇದೇ ಬಾಳುವೆ ಇದೇ ಬಾಳುನೆ
ಇದೇ ಬಾಳು ದೇಹಾಭಿಮಾನಾಸ್ಪದಾ
ಮೂಲ ಕೇಳಿಗಲೇ ಜ್ಞಾನದಿಂದ 1
ಮನದೇಹಗಳು ನಿನ್ನ ನಿಜರೂಪವಲ್ಲ
ಇವುತೋರಿ ಬಯಲಾಗುತಿಹವಾಗಿವೆಲ್ಲ ನಿಜರೂಪವಲ್ಲ
ಇದರಾಚೆಗಿಹ ಶುದ್ಧ ಚೈತನ್ಯ ನಾನೇ
ಅದೇನಾನಿಹೆ ಅದೇ ನಾನಿಹೆ ಅದೇ ಸತ್ಯನೆಂದಾಗ
ಹರಿವುದು ದೇಹಾಭಿಮಾನ ನೋಡುನೀ ಜ್ಞಾನದಿಂದ 2
ಈ ರೀತಿ ಸುವಿಚಾರವನು ಮಾಡಿಕÉೂಂಡು ನಿಜನನ್ನು ಕಂಡು
ಸ್ವರೂಪಾತ್ಮನೋಳು ನಾನು ನೆಲೆ ನಿಂತು ಕೊಂಡು
ಇದೆಲ್ಲ ಈ ಸಂಸಾರ ಕನಸೆಂದು ಕಂಡು
ಪರಮಾತ್ಮನನೆ ವೃತ್ತಿಯೊಳು ತುಂಬಿಕೊಡು
ಆನಂದ ಉಂಡು ಬಿಡೋ ಚಿಂತೆಯ ಬಿಡೋ ಚಿಂತೆಯಾ
ಬಿಡೋ ಬಾಳ ಚಿಂತೆಯಾ ಶ್ರೀ ಶಂಕರಾಚಾರ್ಯರಿ
ಬÉೂೀಧದ ಜ್ಞಾನದಿಂದ 3