ಭುವನವಿಖ್ಯಾತೆ||
ಪಾಲಿಸು ಪರತರ| ಪಾವನೆ ಮಾತೆ ಪ
ಕಾಳಿಯೆ ಕರುಣಿಯೆ| ಶೀಲಸಂಪನ್ನೆಯೆ||
ಖಳಕುಲನಾಶಿನಿ | ಜಲಜಾಂಬಿಕೆಯೆ ಅ.ಪ
ಸುರ ನರ ಕಿನ್ನರ| ಉರಗರು ಸೇವೆಯ||
ನಿರುತವು ಸಲಿಸುವ| ಪರಮೇಶ್ವರಿಯೆ 1
ಚರಣವ ಭಜಿಸುವ| ಶರಣರ ಪೊರೆವ||
ಬಿರುದನು ಪಡೆದ| ಕರುಣಾಕರೆಯೆ2
ಶಂಕರಿ ಶುಭಕರಿ|| ಶಂಕರಪ್ರಿಯಕರಿ||
ಕಿಂಕರಪಾಲಯೆ| ಪಂಕಜಮುಖಿಯೆ 3
ಕರಿವರಗಮನೆಯೆ| ಕರಿಮುಖಜನನಿಯೆ||
ಕರುಣದಿ ಪಾಲಿಸು| ಕಟಿಲೇಶ್ವರಿಯೆ4