ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾದಿ ಪೊರೆಯನ್ನ ಪಾರ್ವತೀರಮಣ ಪುರಹರನೆ ಕರುಣಿಪುದೆಮಗೆ ಸುಜ್ಞಾನ ಈ ಪ ಧರಣಿಯೊಳು ಗೂಗಲ್ಲು ಕ್ಷೇತ್ರ ಸುಮಂದಿರನೆ ನಿನ್ನ ಅನುದಿನ ಅ.ಪ ದುರಿತ ಗಜ ಪಂಚಾಸ್ಯ ಕರಮುಗಿವೆ ನೆರೆನಂಬಿನಿನ್ನನು ಶೇವಿಸುವ ಶರಣರಿಗೆ ಸುರತರುವೆ ಜನಿಸಿರುವರೊಳು ಸರ್ವರಿಗೆ ಮನದಲಿ ಪ್ರೇರಿಸುವ ಗುರುವೆ ಗೂಗಲ್ಲಪ್ರಭುವೆ 1 ಭಾಗವತಸು ತಿಳಿಸೆನ್ನ ಮನಕೆ ಜಿತ ಮನೋಜಾತ 2 ಪರಿಪಾಲಿಸಲು ಶಿವನೆ ರಾಜಿಸುವ ಕೃಷ್ಣಾಕೂಲದಲಿ ನಿಂದಿರುವಿ ಶಂಕರನೇ ಜನಮೇಜಯಾಖ್ಯ ಪಾದ ಸುವಿಶಾಲ ಮಹಿಮನೇ 3 ನೀಡಿದೆಯೊ ಗೌತುಮ ಮನಮಂದಿರದಿ ಗೋ- ವಿಂದನಂಘ್ರಿಯ ಕಾಂಬುವೊ ಬಗೆಯ ತೋರೆನಗೆ ಜೀಯ4 ಶ್ರೀಶ್ವೇತಗಿರಿ ಸುಕ್ಷೇತ್ರ ಪಂಚ ಕ್ರೋಶಗನು ನೀನೆ ಸರ್ವೇಶ ಕಾರ್ಪರ ವಾಸಸಿರಿ ನರಕೇಸರಿಗೆ ಪ್ರಿಯನೇ ದುರ್ವಿಷಯದಲಿ ಅಭಿಲಾಷೆ ಪುಟ್ಟಿಸದಂತೆ ಶಶಿಧರನೆ ಸಿರಿವ್ಯಾಸಕುವರನೇ5
--------------
ಕಾರ್ಪರ ನರಹರಿದಾಸರು
ಬನ್ನವನಾ ನೀಗಿದೆ ಜವದಿ ಧನ್ಯನಾದೆ ಶ್ರೀ ಗುರುವೆ ಧನ್ಯನಾದೆ ಸದ್ಗುರುವೇ ಧನ್ಯನಾದೆ ಪ ಭವಸಾಗರವಾ ದಾಟಿದೆ ಜವನ ಬಾಧೆಯ ನೀಗಿದೆ ಜೀವಭಾವವು ಸಟಿಯೆಂದೆನಿಸಿ ದೇವನಾದೆ ಪಾವನನೆ ಧನ್ಯನಾದೆ 1 ಅರಿತೆನೆನ್ನಯ ನಿಜರೂಪವನಾ ದುರಿತವ ನೀಗಿದೆ ಅರಿವಿನ ಬಲದಿ ದೊರಕಿತು ಮುಕುತಿ ಧನ್ಯನಹುದು ನಾ ನೀನೆ ನಾನೈ ಶಂಕರನೇ ಧನ್ಯನಾದೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಶಂಭು ಶಂಕರನೆ ನಿನಗೊಂದಿಸಿ ಬೇಡುವೆ ಬಿಂಬದಲ್ಲಿರುವ ಮನ ಸ್ವಾಮಿಯ ತೋರೈ ಪ. ರುದ್ರ ದೇವನೆ ಮನಶುದ್ಧಿಯ ನೀ ಮಾಡಿ ಶ್ರದ್ದೆಯಿಂದಲಿ ಅನಿರುದ್ಧನ ತೋರೈ 1 ಸಿದ್ದಗುಣಗಳೊಡೆಯ ಉದ್ದರಿಸೆನ್ನ ಹದ್ದುವಾಹನ ಪ್ರದ್ಯುಮ್ನನ ತೋರೈ 2 ಶಂಕರನೇ ನಿನ್ನ ಕಿಂಕರಳನೆ ಮಾಡಿ ಮಂಕುಬುದ್ದಿಯ ಬಿಡಿಸಿ ಸಂಕರುಷಣನ ತೋರೈ 3 ವಾಸುದೇವನಿಗೆ ಶಿಶುವಿನ ಶಿಶು ನೀನಾಗಿ ಹುಸಿಯ ಮಾಡದೆ ವಾಸುದೇವನ ತೋರೈ 4 ಪಾರ್ವತಿ ಪತಿಹರ ಪಾಪವ ಕಳೆಸೆನೆಗೆ ಪಾರ್ಥನ ಸಖನ ನಾರಾಯಣನ ತೋರೈ 5 ನಂದಿವಾಹನ ನಿನಗೊಂದಿಸಿ ಬೇಡುವೆ ಬಂಧನ ಬಿಡಿಸಿ ಗೋವಿಂದನ ತೋರೈ 6 ರಮಾವಲ್ಲಭ ವಿಠಲ ನಾಮವ ಅನುಗಾಲ ನುಡಿವಂತೆ ವರಗಳ ನೀ ನೀಡೈ 7
--------------
ಕಳಸದ ಸುಂದರಮ್ಮ
ಶಶಿಕಲಾ ಭೂಷಣನೆ ಶಂಕರನೆ ಪ ಗಂಗಾಧರನೆ ಗೌರೀವರನೆ ಅಂಗಜಮದಹರನೇ ಶಂಕರನೇ 1 ಮೃತ್ಯುಂಜಯನೆ ಮುಪ್ಪುರ ಹರನೆ ಭಕ್ತರ ಪೊರೆಯುವನೆ ಶಂಕರನೆ 2 ಶ್ರೀಕಾಂತ ಹಿತಸಖ ಏಕಾಂತ ಹೃದಯ ನೀ ಕರುಣಿಸೊ ಸದಯಾ ಶಂಕರನೆ 3
--------------
ಲಕ್ಷ್ಮೀನಾರಯಣರಾಯರು
ಶಿವಸ್ತುತಿ ಶಂಕರನೇ ಸೌಖ್ಯದಾತ ಸಂಕಟ ನಿವಾರಣ ಶಿವ ಪ ತನುಮನಕಾಧಾರನಾದ ಘನಪರಾನಂದಾರ್ತ ವಿನಂಯದಿಂದ ನೋಡಲಕ್ಷ ಚಿನುಮಯಾತ್ಮನೇ ನೀ 1 ಚಿದ್ದಿಲಾಸ ಜಗವಿದೆಲ್ಲಾ ಅದ್ವಯಾನಂದಾಖ್ಯನೇ ಸಿದ್ಧನಾಗಿ ತೋರುತಿರುವಬಿದ್ರೂಪಾರ್ತನೇ ನೀ 2 ವಾಗ್ಮನಗೋಚರನೇ ಸಂಗರಹಿತ ಸ್ವಪ್ರಕಾಶ ಮಂಗಳಾತ್ಮ ಜ್ಯೋತಿರ್ಮಯ ಗಂಗಾಧರನೇ ನೀ 3 ಅಂತರಾನಂದಾರ್ತ ಜ್ಞಾನ ಸಂತ ಸಾದು ಸಾಧ್ಯನೇ ಶಾಂತಿ ಪದವನಿತ್ತ ಗುರು ಶಾಂತರೂಪನೇ ನೀ 4
--------------
ಶಾಂತಿಬಾಯಿ