ಒಟ್ಟು 22 ಕಡೆಗಳಲ್ಲಿ , 8 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೆನಾನು | ಶಂಕರನಾ | ನಿಂದಿಹ ಕೋಟೇಶ್ವರನಾ ಪ ಅವದುಂಬರ ಮುನಿಯಾ | ತಾಪಕೊಲಿದು ತಾವದಗಿದೇ ನಡೆತಂದು 1 ಕೃಷ್ಣ ವೇಣಿಯಾ ಮಧ್ಯಾ ಜಲದೊಳಗ | ವಿಷ್ಣು ಸಹಿತ ಸಲುವನೀಗ 2 ವರ ಶೂರ್ಪಾಲಯದೀ | ತಾಮೆರೆವಾ | ಗುರುಮಹಿಪತಿ ಸುತ ಜೀವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇ ಪೂರ್ಣಪದಾ ತಿಳಿ ಜೀವಾ ಆತ್ಮಸ್ವರೂಪಾ ನೋಡು ನೀ ಈ ಜಗಕೆಲ್ಲ ಆಧಾರಾ ಪರಮಪದವದೇ ನೊಡು ನೀ ಪ ತೋರುವೀ ಜೀವರಾಧಾರ ತೋರದಾ ಪೂರ್ಣಾಜ್ಞಾನರೂಪ ಅದೇ ಕಲ್ಪನೆರಹಿತ ಅದ್ವೈತ ಪರಮಪದವದೇ ನೋಡು ನೀ 1 ಮನವಾಣಿಗೆ ಸಿಗದ ಆ ಸ್ಥಿತಿ ಪೂರ್ಣಾ ಪರಮಾತ್ಮನೈ ಅದೇ ನೀನಿಹೆ ಜೀವಾ ತಿಳಿಯಿದನಾ ಗುರು ಶಂಕರನಾ ಬೋಧನಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಗಂಟೆ ಹೊಡೆಯುತಿದೆ ಕೇಳೆಲೋ ಮೂಢಾ ಪಂಟು ಬಡಿಯುತ ಕೊಡಲುಬೇಡಾ ಪ ಶ್ರುತಿಶಿರಗಳ ಬೋಧದ ಈ ಗಂಟೆ ಮತಿವಿಭ್ರಮೆಯ ಬಿಡಿಸುವ ಗಂಟೆ ಅತಿಮಾನವಸ್ಥಿತಿ ಸಾರುವ ಗಂಟೆ ಕ್ಷಿತಿಯೊಳಗಿದುವೆ ಸಾರ್ಥಕ ಗಂಟೆ 1 ಜೀವೇಶ್ವರರೈಕ್ಯದ ಘನ ಗಂಟೆ ದೇವನೆ ನೀನೆಂದರುಹುವ ಗಂಟೆ ಸಾವಿನ ಸಂಕಟ ಕಳೆಯುವ ಗಂಟೆ ಕಿವಿಯಿದ್ದು ಕೇಳದೆ ಬಿಡುವವರುಂಟೇ2 ತೋರಿಕೆ ಅನಿಸಿಕೆ ಪುಸಿ ಎಂಬ ಗಂಟೆ ಪಾರಮಾರ್ಥ ಸತ್ಯದ ಸವಿ ಗಂಟೆ ಘೋರನಿದ್ರೆಯಿಂದೆಚ್ಚರಿಸುವ ಗಂಟೆ ಗುರುಶಂಕರನಾ ಪ್ರವಚನ ಗಂಟೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಚಿರಶಾಂತಿಯ ಪಡೆವುದಕೆ ಮನ ತ್ಯಾಗಮಾಡು ಜೀವಾ ಮನವೇ ಭವಬಂಧನಕೆ ಘನಕಾರಣವೈ ಜೀವಾ ಪ ತಿಳಿ ಈ ಮನದಾ ನಾಶಾ ಆದಾಗಲೆ ನಿಜಮುಕುತಿ ಮನ ಮೋಕ್ಷದ ಸಾಧನವೈ ಅನುಮಾನಿಸದಿರು ಜೀವಾ 1 ಮನವಿಲ್ಲದ ಆ ಸ್ವರೂಪ ಅದು ತಾನೆ ನಿರ್ವಿಕಲ್ಪ ಅದೆ ನಾನಿಹೆನೆಂದರಿಯೈ ಇದೆ ಮನದ ತ್ಯಾಗ ಜೀವಾ 2 ಪರಮ ಪದ ಆನಂದ ವೇದಾಂತದ ಘನಬೋಧಾ ಗುರುಪುಂಗವ ಶಂಕರನಾ ಪರಮಾರ್ಥ ಬೋಧಸಾರ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಜಿಜ್ಞಾಸುವಿನ ಲಕ್ಷಣಾ ಕೇಳು ನೀಕ್ಷಣಾ ಪರಮಸುಖಾಕಾಂಕ್ಷಕನಾ ಬಾಳಿನ ವಿಷಯದಿ ಬೇಸರಗೊಳು ತಾ ವಿರತಿಯಿಂದರುವಾ ಬೋಧ ಕೇಳ್ವನಿವಾ ಚಿತ್ತದಿ ಭಕ್ತಿಭಾವನಾ ತಾಳುತ ಸಾಧನಾ ಮಾಡುತಲಿಹನಿವ ಕಾಣಾ ಆತ್ಮಾನಾತ್ಮನಿವೇಕ ವಿಚಾರ ಕೇಳುತ ತನ್ನೊಳಗÉೀ ಮಿಥ್ಯಾರೊಪಿತ ಜೀವಭಾವನನಾ ಜರÉಯುತ ಮನದೊಳಗೇ ಮಾಡುವ ಸುವಿಚಾರಾ ಇವನೆ ಧೀರ ಪರಮಸುಖಕಾಂಕ್ಷಕನಾ ವಿಷಯದಿ ಹರಿಯುವ ಮನವÀನೆಳೆÀದು ಬೋಧದೊಳಗಿರುವಾ ಮೋದ ಹೊಂದುವ ತಾ ಶ್ರೀ ಗುರುಶಂಕರನಾ ಆನಂದರೂಪನಾಬೆರೆತು ನಾ ಸುಖಿಸುವನಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಜ್ಞಾನಸುಧೆಯ ಪಾನಮಾಡಿ ಸ್ವಾನುಭವದಿ ಲೀನನಾದೆ ಹೀನ ಭವದ ತಾಪವೆನಗೆ ಬಾಧಿಸುತಿರೆ ಗುರು ನೀಡಿದ ಪ ಜೀವನ ಸುಖದುಃಖದಾ ಭಾವ ಜೋಲಿಗಳನು ಮರೆದು ದೇವ ನಾನೆ ಎಂದು ತಿಳಿದು ಪಾವನಾತ್ಮನೊಳಗೆ ಬೆರೆದು 1 ನಾನು ನೀನು ಎಂಬ ಭೇದ ಏನು ಮೋಜು ಮಾಯವಾಯ್ತು ಕಾಣದಾಯ್ತು ಜೀವಭಾವ ಜ್ಞಾನಬೋಧದಾ ಪ್ರಭಾವ2 ಭಾನ ಮರೆದು ದೇಹಮನದ ಜ್ಞಾನಗೀತೆಗಳನು ಪಾಡಿ ತಾನೆ ತಾನಾಗಿರುವ ಜ್ಞಾನಿ ಗುರುವಿನೊಳಗೆ ಕೂಡಿ 3 ಕಲ್ಪನಾವಿಲಾಸ ಪೋಗಿ ಅಲ್ಪನೆಂಬ ಮತಿಯ ನೀಗಿ ಅಲ್ಪನಾತೀತನಾದನಲ್ಪನಾದ ಶಂಕರನಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳೀಮನವೇ ತಿಳೀಮನವೇ ತಿಳೀಮನವೇ ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ ಭಾವಾತೀತನ ನೀ ತಿಳೀಮನವೇ ಪ ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ ಅಡಗಿದ ಗೂಢವಿದು ತಿಳೀಮನವೇ 1 ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ ಮರ್ಮವಿದು ಘನಶಾಂತಿಯಾ ಸ್ಥಾನಾ ಧರ್ಮಾಧರ್ಮವ ಮೀರಿಹ ತಾಣ ದುರ್ಮತಿಯಾ ಬಿಡು ಜಾಣಾ ಘೋರತರದ ಸಂಸಾರದ ನಾಶಾ ಪೂರಣಗೊಂಬುದು ಆಶಾ ಪರಾಶಾಂತಿಗಿನ್ನೊಂದನು ಕಾಣೆ ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ 2
--------------
ಶಂಕರಭಟ್ಟ ಅಗ್ನಿಹೋತ್ರಿ
ದೇವನಾ ದರುಶನಾ ಜೀವನಾ ಪಾವನಾ ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1 ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ ದುರುಳ ಭವ ಗುರುವಿತ್ತಾತ್ಮಾನುಭವ 2 ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ನಿ............... ನೇ ಪರಮಾತ್ಮನು ನೋಡೈ ವಿಚಾರಿಸಿ ನಡೆ ಬೇಗ ಸ್ವಮಾನಸದಿ ತಿಳಿಯೆಂದಾ ತಿಳಿಯೇ ದೇವನಾಗುವಿ ಎಂದಾ ಗುರು ಶಂಕರನಾ ಕಂದಾ
--------------
ಶಂಕರಭಟ್ಟ ಅಗ್ನಿಹೋತ್ರಿ
ನಿತ್ಯ ಭೂತಗಳಟ್ಟಿ ಕಿಂಕರರನು ಸಲಹುತಲಿ ಪಂಕಜಾಕ್ಷನ ಪಾಡಿ ಪೊಗಳುವೆ ಕೊಡಗಿಯ ಶಂಕರನಾರಾಯಣರ ಪ ಪಡುವಿನ ಗಡಲಿನ ತಡಿಯಲಿ ವಿಪ್ರನ ಗಡಣದ ನಡುವೆ ಕಾನನದಿ ಒಡೆದುಮೂಡಿದ ದೇವರೊಡೆಯನ ಕೊಡಗಿಯ ಮೃಡನಾರಾಯಣರ ವರ್ಣಿಸುವೆ1 ದರ್ಪನ ವೈರಿಯಪಿತನ ತಪ್ಪದೆ ನಂದಿ ಗರುಡವಾಹನನಾ- ಗಿಪ್ಪದೇವನ ಕಂಡೆನಿಂದು 2 ಮಂಜುಳ ಸರ್ಪಾಭರಣನ ಕಂಡೆನು ಮಂಜುಳ ಹಾರಪದಕನ ಕುಂಜರ ಚರ್ಮವು ಪೊಂಬಟ್ಟೆವಸನವು ಕೆಂಜೆಡೆ ಮಕುಟದ ಪ್ರಭೆಯು 3 ಪುರಹರ ಗೌರೀಶಲಕ್ಷ್ಮೀಶ ಗಿರಿವಾಸ ವೈಕುಂಠವಾಸ ವರಚಕ್ರ ತ್ರಿಶೂಲಧರ ತ್ರಾಹಿಯೆಂಬ ಮ- ತ್ರ್ಯರ ಮನ್ನಿಸುವ ಕರುಣದಲಿ 4 ವ್ರತದಿಂದ ನೋಡುವ ಯತಿಗಳ ಸಂದಣಿ ಶ್ರುತಿ ಪುರಾಣಗಳರ್ಥಿ ಕೊಡಗಿಯ ದೇವನ ಮತಿಗೆ ಮಂಗಳವೀವುತಿದಿದಕೊ 5 ರಂಗಪೂಜೆಗಳ ಸಂದಣಿ ಒಂದು ಕಡೆಯಲ್ಲಿ ಮಂಗಳಾರತಿಯ ಸಂಭ್ರಮವು ತುಂಗವಿಕ್ರಮನ ಸ್ತುತಿಸಿ ಪಾಡಿ ಪೊಗಳುವ ಹಿಂಗದೆ ನೋಡುವ ಜನರು 6 ಅಯನದ ಶ್ರೀಬಲಿ ದೀಪದುತ್ಸಹಗಳು ಭುವನದ ನಡುವೆ ಕಾನನದಿ ಹಯವದನನೆಂಬ ಕೊಡಗಿಯ ದೇವನ ನಯದಿ ನರರಿಗೆ ತುತಿಸಲಿನ್ನಳವೆ 7
--------------
ವಾದಿರಾಜ
ನಿನ್ನೊಳು ನೀ ತಿಳಿಯೋ ಮನುಜ ಪ ಪರಮಾತ್ಮನೆ ನೀನಿರುವಿಯೊ ಮನುಜಾ ಅರಿತು ನೋಡು ನಿನ್ನಯ ನಿಜವಾ ಮರೆತಿರುವಿಯೊ ನೀ ನಿನ್ನಿರುವಿಕೆಯಾ ತೋರುವ ದೇಹವು ನಾನಲ್ಲೆಂದು 1 ನನಸಿನ ದೇಹವು ಕನಸಿನೊಳುಂಟೆ ನೆನಸಿ ನೋಡು ನಿನ್ನಿರುವಿಕೆ ಸಮವು ನನಸಿನ ದೇಹವು ನಾನಲ್ಲೆಂದು 2 ಗಾಢನಿದ್ರೆಯಲಿ ಅಡಗಿತು ಬುಧ್ಧಿಯು ಗಡನೆ ನೋಡು ನಿನ್ನಿರುವಿಕೆಯಾ ಜಡದೇಹವು ಮನಬುದ್ಧ್ಯಾದಿಗಳಿಂ ಬಿಡಿಯಾದಿರುವಿಕೆಯುಳಿವುದು ನೀನೇ 3 ಮೂರು ಜಾಗೆಯಲಿ ನಿರುತದೊಳಿರುತಿಹ ಇರವರಿವಾನಂದವೆ ನೀನೈ ಮರೆತು ಇದನು ನೀ ಬರಿದೇ ಮಿಡುಕುವಿ ದೊರಕುವದೇ ಸುಖ ಹೊರಗೆ ಹುಡುಕಲು 4 ತೋರಿಕೆ ಅನಿಸಿಕೆಗಳು ಕ್ಷಣಭಂಗುರ ಮರಣರಹಿತ ಪರವಸ್ತುವು ನೀನೆ ಅರಿವೇ ಪರಬ್ರಹ್ಮವು ತಾನೆಂದು ವರಶ್ರುತಿ ಸಾರಿತು ಬ್ರಹ್ಮನೆ ನೀನೈ 5 ಗರುವಿನ ಕರುಣದಿ ತಿಳಿಯೇ ವಿಷಯವ ಮರುಳಾಗದಿರೈ ಮಾಯಾಕಾರ್ಯಕೆ ಗುರುಶಂಕರನಾ ಪದವಿಯ ಪಡೆಯುವಿ6
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮಾತ್ಮನ ನೆನೆಯಲು ಬೇಕು ಪರತರಸುಖವನು ಪಡೆಯುವನಿದರಿಂ ದುರಿತಗಳೆಲ್ಲವ ನೀಗಲು ತಾ ಪ ಮೊದಲನೆ ಕಾರ್ಯವು ಜೀವರೆಲ್ಲರಿಗೆ ಇದು ಬಲು ಸುಲಭವು ಸಾಧನಗಳಲೀ ಪದುಮನಾಭನನು ನೆನೆಯದಿರುವವ ಅಧಮನು ಜಗದಿ ವ್ಯರ್ಥ ಜೀವಿಸುವ 1 ಎಲ್ಲ ವೇದಗಳು ಎಲ್ಲ ಶಾಸ್ತ್ರಗಳು ಎಲ್ಲ ಸಾಧನೆಗಳು ಆತನ ಪ್ರಾಪ್ತಿಗೆ ಬಲ್ಲವರಿಂದಲಿ ತಿಳಿದು ವಿಚಾರಿಸಿ ನಿಲ್ಲದೆ ಸಾಧನೆ ಕೈಕೊಳ್ಳುವುದು 2 ಕೇಳುವದೈ ಪರಮಾತ್ಮನ ತತ್ವವ ತಿಳಿವುದು ತನ್ನೊಳು ತಾನೇ ನಿರುತಾ ಪೇಳಲೇನು ಧ್ಯಾನಿಸುವುದಾತನ ಮೇಳವಿಸುವದೈ ಜೀವನ್ಮುಕುತಿ 3 ನಾರಾಯಣನೇ ಪರಮಗತಿಯು ಈ ನರಜನ್ಮಕೆ ಬಂದಿರೆ ಲಾಭವಿದೇ ಅರಿತು ಇದನು ತಾ ಸಾಧನೆ ಮಾಳ್ಪುದು ಗುರುಶಂಕರನಾ ಬೋಧಸಾರವಿದು 4
--------------
ಶಂಕರಭಟ್ಟ ಅಗ್ನಿಹೋತ್ರಿ
ಪಾದಕ ನಮಿಸುವೆನಾ ಶಿವನಾ | ಪಾದಕ ನಮಿಸುವೆನಾ ಪ ಮುರ ಹರನಾ ಶಂಕರನಾ1 ಅಮಿತ ಗುಣಾಂಬುಧಿ ಅಘಶಮನಾ | ಸುಮನಾವಳಿ ಸುತ - ಗೋಗಮನಾ | ಕುಮನಾ ಸುರ ದಮನಾ ಸುಮಹಿಮನಾ 2 ಗುರು ಮಹಿಪತಿ - ಸುತ ಭಯಹರನಾ | ಕರುಣಾ ನಂದ ದಯಾಗರನಾ | ಅಜ ಶಿರ ಧರನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಯ ಗಂಗಾಧರಪ್ರಿಯ ರಮಣಿ ಬಾಲಾಂಬಿಕೆ ಫಣಿವೇಣಿ ಕಲ್ಯಾಣಿ ಪ ಶ್ರೀಲಲಿತೆ ವರದಾಯಕ ಮಹಿತೆ ಬಾಲಗೋಪಾಲ ಸೋದರಿ ಶುಭಚರಿತೆ 1 ದೇವಿ ಭವಾನಿ ಶಿವೆ ಕಾತ್ಯಾಯಿನಿ ಪಾವನಿ ಭಾಮಿನಿ ತ್ರಿಜಗನ್ಮೋಹಿನಿ 2 ಮಂಗಳದಾಯಕಿ ಶಂಕರನಾಯಕಿ ಮಾಂಗಿರಿರಂಗ ಕೃಪಾಂಬರದಾಯಕಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪ್ರದೋಷಕಾಲವಿದೀಗ ನೀ ಮರೆ- ಯದೇ ನೆನೆಯೊ ಶಿವನಾ ಶಂಕರನಾ ಪ ಸದಾ ಸಕಲ ಸುರರಿಂದ ಕೂಡಿ ತಕ ತಧಿಂ ಎನುತ ಕುಣಿಯುವ ಶಿವನೀಗಲೂ ಅ.ಪ ಸಕಲ ವಾದ್ಯಗಳೂ ಶಂಭೋ ಎಂಬ ಸುವಾದಗಳೂ ತುಂಬುರ ನಾರದರೂ ನುಡಿಸಿ ಹೇ- ರಂಬ ಜನಕ ವಿಶ್ವಂಭರ ಎಂದು ದಿ- ಗಂಬರನಾಗಿ ಚಿದಂಬರ ಕುಣಿಯುವ 1 ಭೂಷಣಗಳ ಮಾಡಿ ಭಿಕ್ಷವನೂ ಬೇಡಿ ತಾತನಾಗಿ ಮೆರೆದು ಹಿಮ ಶೈಲ- ಜಾತೆ ಸಹಿತ ಪ್ರಖ್ಯಾತನಾಗಿ ಭವ- ಭೀತಿ ಬಿಡಿಸಿ ದುಃಖೇತರ ಕೊಡುವನು 2 ಗಿರಿರಾಜಕುಮಾರಿ ಕೈಮುಗಿದು ತನಗರುಹು ತತ್ವವೆನಲು ಸುರರು ಭಲಾ ಎನಲು ಪರಮ ಗುಣಸಾಂದ್ರ | ಕೇಳು ದಿನ- ಪರಾತ್ಪರನು ಶ್ರೀ ಗುರುರಾಮವಿಠಲ ವರತಾರಕ ಮಂತ್ರವಿದೇ ಎಂದನು 3
--------------
ಗುರುರಾಮವಿಠಲ