ಆಲಿಸು ಮನುಜಾ ಮಾಯಾಕಾರ್ಯಕೆ
ಮೋಸಹೋಗಲು ಬೇಡಾ ವಿಚಾರಿಸು
ತೋರಿಕೆಯು ಪುಸಿಯಹುದು ಈ ಪ
ಜಗದೊಳು ತೋರುವ ಅಘಟಿತಘಟನೆ
ಮಿಗಿಲೆನಿಸುತಲಿಹುದೋ ಗಡಾ
ಅಘಟಿತಘಟನೆಯೆ ಜ್ಞಾನವದೆಂದು
ಬಗೆಯುತ ನೀ ಕೆಡಬೇಡ 1
ಸಿದ್ಧಿಯ ಫಲವದು ಅಘಟಿತಘಟನೆ
ಬುದ್ಧಿವಂತನೆ ತಿಳಿ ನೀ
ಶುದ್ಧ ಚೈತನ್ಯದಿ ಮಾಯೆಯದಿಲ್ಲೈ
ಸಿಧ್ದಿ ಮಾಯೆಯ ಮಗಳು 2
ಜ್ಞಾನಸಿದ್ಧಿಗಳ ಭೇದವನರಿಯುತ
ಜ್ಞಾನಿಯಾಗೆಲೊ ಮನುಜಾ
ನಾನಾಪರಿಯಿಂ ಪೇಳಿದನಿದನಾ
ಜ್ಞಾನಿ ಶಂಕರಗುರುರಾಯಾ 3