ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿ ಕೆಟ್ಟವರಿಲ್ಲವೊ ಸದ್ಗುರುವಿನ ನಂಬಿ ಕೆಟ್ಟವರಿಲ್ಲವೊ ನಂಬದೆ ಗುರುವಿನ ಜ್ಞಾನದ ಬೋಧವ ಹುಂಬತನವ ಮಾಡಿ ಕೆಟ್ಟರೆ ಕೆಡಲಯ್ಯ ಪ ಕೇಳಬೇಡೆಲೊ ದುಃಖವಾ ಏಳು ಎಚ್ಚರಗೊಳ್ಳು ಕೀಳುತನವ ಬಿಡು ಹೇಳಿಕೊಡುವೆನೆಂಬ ಗುರುವಿನ ನುಡಿಯನು 1 ದೇಹಬುದ್ಧಿಯ ಬಿಡಿಸಿ ವಿವೇಕದಿ ದೇವಬುದ್ದಿಯನಿರಿಸಿ ಸೋಹವೆಂಬುವ ಮಹಾಮಂತ್ರವ ಬೋಧಿಸಿ ಮೋಹವನೋಡಿಸಿ ಕಾಯುವ ಗುರುವಿನ 2 ಸಂಚಿತ ಮೊದಲಾದ ಕರ್ಮವ ನೀಗಿಸಿ ಹಂಚಿಕೆಯಿಂದಲಿ ಮುಕ್ತನ ಮಾಡುವ ಪಂಚಕಸಾಕ್ಷಿ ಶ್ರೀಗುರುವಿನ ಬೋಧವ 3 ಸ್ವಾನುಭವನೀಡುವಾ ಏನೊಂದು ಬಯಸದೆ ಜ್ಞಾನದಾನವ ಮಾಳ್ಪ ಜ್ಞಾನಿ ಶಂಕರಗುರುರಾಯನ ನುಡಿಯನು 4
--------------
ಶಂಕರಭಟ್ಟ ಅಗ್ನಿಹೋತ್ರಿ