ಶ್ರೀನಿಕೇತನ ಪಾಲಯ ಮಾಂ ಪ
ಜ್ಞಾನಗಮ್ಯ ಕರುಣಾನಿಧೆ ನಿನ್ನಡಿ
ಗಾನಮಿಸುವೆ ಪೊರೆ ದೀನ ದಯಾಳೊ ಅ
ಜ್ಞಾನ ಮಾನದ ಶರಣರ ಸುರಧೇನು ಸರ್ವದಾ
ನೀನೆಂದರಿದು ಸದಾನುರಾಗದಲಿ
ಧೇನಿಪೆ ಮನದನುಮಾನವ ಕಳೆಯೋ 1
ಪರಾಕು ಅಚ್ಯುತ
ಶೋಕನಾಶನ ವಿಶೋಕ ಸುಲಭ ಹೃದ್
ವ್ಯಾಕುಲ ಕಳೆ ಏಕ ಪ್ರಕಾರದಿ ಒಲಿದು 2
ಪನ್ನಗಾಚಲ ನಿವಾಸ ಪ್ರಪನ್ನ ವತ್ಸಲಾ
ಬಿನ್ನಪ ಕೇಳು ಜಗನ್ನಾಥ ವಿಠ್ಠಲ
ಧನ್ಯನಮಾಡು ಶÀರಣ್ಯ ಶರಣನ 3