ಮಹಾಮಾಯೆ ಗೌರಿ ಮಾಹೇಶ್ವರಿಪ.
ವiಹಾದೇವಮನೋಹಾರಿ ಶಂಕರಿ
ಮಹಾಪಾಪಧ್ವಂಸಕಾರಿ ಶ್ರೀಕರಿ
ಮಾಂ ಪಾಹಿ ಪಾಹಿ ಶೌರಿಸೋದರಿಅ.ಪ.
ಕಾಮಕೋಟಿಸುಂದರಿ ಶುಭಕರಿ ಕರಿಕುಂಭಪಯೋಧರಿ
ಕಾಮಿತಪ್ರದೆ ಕಂಬುಕಂಧರಿ
ಹೇಮಾಲಂಕಾರಿ ಹೈಮವತಿ ಕುವರಿ1
ಭಾನುಕೋಟಿಭಾಸ್ಕರಿ ಭವಹರಿ ಭಜಕಾಮೃತಲಹರಿ
ಸ್ಥಾಣುವಲ್ಲಭೆ ದನುಜಸಂಹಾರಿ
ಜ್ಞಾನಾಗೋಚರಿ ಜಗತ್ರಯೇಶ್ವರಿ2
ಪೂರ್ವದೇವಭೀಕರಿ ಭ್ರಾಮರಿ ಪುಳಿನಾಖ್ಯ ಪುರೇಶ್ವರಿ
ಸರ್ವಲಕ್ಷ್ಮೀನಾರಾಯಣೇಶ್ವರಿ
ಸರ್ವಸಹಚರಿ ಶಶಾಂಕಶೇಖರಿ3