ಕೋಲ ಕೋಲೆನ್ನಿ ಕೋಲ ಕೋಲೆನ್ನಿಲಕ್ಷ್ಮೀಲೋಲ ನಿಂತಾನೆÉಂದು ಕೋಲೆನ್ನಿ ಪ.
ಅಚ್ಚ ಮುತ್ತಿನ ಸರಗಳನಿಟ್ಟುಕೃಷ್ಣ ಮಚ್ಛ ರೂಪದಿ ನಿಂತ ಕೋಲೆನ್ನಿ1
ಹೇಮ ರತ್ನದಾಭರಣಗಳನಿಟ್ಟು ಕೃಷ್ಣಕೂರ್ಮರೂಪದಿ ನಿಂತ ಕೋಲೆನ್ನಿ 2
ವರಾಹ ರೂಪದಿ ನಿಂತ ಕೋಲೆನ್ನಿ 3
ಪ್ರೇಮದಿ ರತ್ನದ ವಸ್ತಗಳಿಟ್ಟುಕೃಷ್ಣ ನರಸಿಂಹ ರೂಪದಿ ಬಂದ ಕೋಲೆನ್ನಿ4
ಶೀಘ್ರದಿ ರತ್ನದ ವಸ್ತಗಳಿಟ್ಟುಕೃಷ್ಣ ವಾಮನ ರೂಪದಿ ನಿಂತ ಕೋಲೆನ್ನಿ5
ಭರದಿ ಮುತ್ತಿನ ಸರಗಳಿಟ್ಟು ಕೃಷ್ಣಭಾರ್ಗವ ರೂಪದಿ ನಿಂತ ಕೋಲೆನ್ನಿ 6
ನೂತನ ಮುತ್ತಿನ ಸರಗಳಿಟ್ಟುಕೃಷ್ಣ ಸೀತಾರಾವiನು ನಿಂತ ಕೋಲೆನ್ನಿ 7
ತಿದ್ದಿದ ರತ್ನದ ವಸ್ತಗಳಿಟ್ಟುಕೃಷ್ಣ ಮುದ್ದು ರೂಪದಿ ನಿಂತ ಕೋಲೆನ್ನಿ 8
ಬದ್ಧವಾದ ಮಣಿಗಳನಿಟ್ಟುಕೃಷ್ಣಬುದ್ಧ ರೂಪದಿ ನಿಂತ ಕೋಲೆನ್ನಿ9
ಹಲವು ರತ್ನದ ವಸ್ತಗಳಿಟ್ಟುಕೃಷ್ಣ ಚಲ್ವಕಲ್ಕಿನಿಂತ ಕೋಲೆನ್ನಿ 10
ಚಲ್ವ ರಾಮೇಶ ವಸ್ತಗಳಿಟ್ಟುನಮ್ಮ ಸುಲಭ ಮೂರುತಿ ನಿಂತ ಕೋಲೆನ್ನಿ 11