ಇದೇ ನೋಡಿ ಸ್ವತಶುದ್ಧ ವiಡಿ
ಸದಾ ಸರ್ವದಾ ಇದೇ ಮಾಡಿ ಧ್ರುವ
ಅರಹು ಎಂಬುದೆ ಮಡಿ ಉಡಿ
ಮರಹು ಮೈಲಗಿ ಮುಟ್ಟಬ್ಯಾಡಿ
ಗುರುಸ್ಮರಣೆ ನಿಷ್ಠೆಯೊಳುಗೂಡಿ
ಪರಬ್ರಹ್ಮ ಸ್ವರೂಪದ ನೋಡಿ 1
ಕಾಮಕ್ರೋಧದ ಸ್ವರ್ಶವ ಬ್ಯಾಡಿ
ನೇಮನಿತ್ಯ ಇದನೇ ಮಾಡಿ
ಶಮದಮೆಂಬುದು ಕೈಗೂಡಿ
ಪ್ರೇಮಭಾವ ಭಕ್ತಿಯ ಮಾಡಿ 2
ಮಿಥ್ಯಾ ಭೂತಕ ಮಡಿಮಾಡಬ್ಯಾಡಿ
ಚಿತ್ತಚಿದ್ಛನ ಸಮರಸ ನೋಡಿ
ನಿತ್ಯ ಮಹಿಪತಿಗಿದೆ ಮಡಿ ನೋಡಿ