ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಬಾರಿ ಸ್ಮರಣೆ ಸಾಲದೆ ಆನಂದ- ಪ. ತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರಅ.ಪ. ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದುಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ 1 ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದುಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ 2 ಆರುಮಂದಿ ವ್ಶೆರಿಗಳನು ಸೇರಲೀಸದಂತೆ ಜರಿದುಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ 3 ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ4 ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ 5
--------------
ವಾದಿರಾಜ