ಅಭಾಗ್ಯಾದ ಲಕ್ಷ್ಮಿ ಹೋಗಮ್ಮ ದೊಡ್ಡಮ್ಮ ನೀ ಪ
ಪೀಡೆಕಾಲುಗಳ ಮುಚ್ಚುತ ನೀವೋ
ಡÉೂೀಡಿ ಪೋಗುತಲಿ ನಿಲ್ಲದೆ ವ್ಯಾಜ್ಯಗ-
ಳಾಡುವ ಸ್ಥಳದಲಿ ನೆಲೆಯಾಗುತ ಹಾಳ
ಗೋಡೆಯೊಳಿರುತಿಹ ಕತ್ತೆಯಂತೆ 1
ದೀಪದ ನೆರಳಲಿ ಕೋಪಿಯಮನದಲಿ
ಲೋಪವಾದಕರ್ಮದಿ ಸಂತತವು
ನಾಪರನೆಂಬುವ ಮಾಢನಲ್ಲಿ ನಿ-
ವ್ರ್ಯಾಪಾರಿಯ ಚಿತ್ತದಿ ಯಾವಾಗಲು 2
ಪಾದ ಗದರಿಸುತಾಡುವ ಬಿರುನುಡಿಯಲಿ ನಿಂ-
ದ್ಯದ ಮಾತಾಡುವವರÀ ಬಾಯಲಿನೀ
ಮುದದೊಳಿದ್ದು ಅಜ್ಞಾನವ ಪಾಲಿಸೆ 3
ಪ್ರತಿದಿನದಲಿ ಅಳುತಿಹ ಸಂಸಾರದಿ ನೀ
ಪತಿಯೊಡನವರೊಳಿರುತ ಮೂರ್ಖರಲಿಯ-
ನೃತವಾಡಿಸಿ ನರಕವ ಪೊಂದಿಸಲು 4
ಮರವೆ ಸುಷುಪ್ತಿಯು ಬಹುವಿಧ ಮೋಹವು
ನೆರೆನಂಬಿದವರಿಗೀವುತ ನೀಹಗ-
ಲಿರುಳು ಕಲಿಯೊಡನೆ ಯೆಡೆಬಿಡದಲ್ಲಿಗೆ 5
ಹಾಳುಮಾಡಿಕೊಂಬುವ ಜನಗಳು ನಿ-
ವೂಳಿಗವನು ಕೈಕೊಳ್ಳುತ ಬಿಡದೆ 6
ಗುರುರಾಮ ವಿಠಲನ ಶರಣ ಜನರ ಕ-
ಣ್ದೆರದು ನೋಡದಿರು ಬೇಡುವೆ ನಿನ್ನನು
ನಿರುತವು ನಿರ್ದಯ ಮಾಡುತ ದುರುಳರ
ಪರಮ ಕೃಪಾದೃಷ್ಟಿಯಲಿ ನೋಡಲು 7