ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವಿರಲಿ ದಯವಿರಲಿ ದಾಮೋದರ ಪ. ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣಅ.ಪ. ಹೋಗಿ ಬರುವೆನಯ್ಯ ಹೋದಹಾಂಗೆಲ್ಲಸಾಗುವವನಲ್ಲ ನಾ ನಿನ್ನ ಬಿಟ್ಟುತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದುಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ 1 ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-ಸಾಧ್ಯ ನಿನಗೆಂದು ನಾ ಬಂದವನಲ್ಲನದ್ಯಾದಿ ಕ್ಷೇತ್ರಮೂರ್ತಿಗಳಲ್ಲಿ ನಿಜ ಜ್ಞಾನ-ವೃದ್ಧಜನರ ಹುಡುಕಿ ನಿನ್ನ ತಿಳಿಯಲು ಬಂದೆ 2 ಸತತ ಇದ್ದಲ್ಲೆ ಎನ್ನ ಸಲಹೊ ಅದರೊಳಗಾಗಿಅತಿಶಯವು ಉಂಟು ವಿಭೂತಿಯಲ್ಲಿಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿಸ್ಮøತಿಗೆ ವಿಶೇಷ ಮಾರುತಿರಮಣ ನಿನ್ನ 3 ನೋಡಿದೆನೆ ನಾ ನಿನ್ನ ನೋಡದೆ ಎಂದೆಂದುಪಾಡಿದೆನೆ ಆರಾರು ಪಾಡದೊಂದುಮಾಡಿದೆನೆ ಅರ್ಚನೆಯ ಮೀಸಲಾದುದು ಒಂದುಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು 4 ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-ದಿಂದ ನಿನ್ನ ಬಳಿಗೆ ಇಂದಿರೇಶಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆಬಂಧನ ಕಡಿವ ಭಕುತಿಯು ಜ್ಞಾನ ನೀಡುವುದು 5 ಬಿನ್ನಪವ ಕೇಳು ಸ್ವಾಮಿ ಎನ್ನನ್ನೊಬ್ಬನ್ನೆ ಅಲ್ಲಎನ್ನ ಹೊಂದಿ ನಡೆವ ವೈಷ್ಣವರನಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿಘನಗತಿಗೈದಿಸುವ ಭಕುತಿ ಕೊಡು ಕರುಣದಿ 6 ರಾಜರಾಜೇಶ್ವರ ರಾಜೀವದಳನಯನಮೂಜಗದೊಡೆಯ ಮುಕುಂದಾನಂದಈ ಜೀವಕೀದೇಹ ಬಂದದ್ದಕ್ಕು ಎನಗತಿ ನಿ-ವ್ರ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ 7 ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರುಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊಚಿನುಮಯಮೂರುತಿ ಗೋಪಾಲವಿಠಲಘನಕರುಣಿ ಮಧ್ವಮುನಿಮನಮಂದಿರನಿವಾಸ8
--------------
ಗೋಪಾಲದಾಸರು
ಪವಮಾನ-ಪಾವನಮೂರ್ತಿಯು ನೀನು ಕಾವುದೆಮ್ಮನು ಪ ಭುವನ ಚತುರ್ದಶದಲ್ಲಿಹ ಜೀವರ ಜೀವನ ನಿನ್ನದೋ ದೇವವರೇಣ್ಯಅ.ಪ ತೃಣಜೀವರಾದಿ ಸರ್ವರೊಳು ನಿಂತು ಗುಣಕಾಲಕರ್ಮಕ್ಕನುಗುಣನಾಗಿಹ ಫಲವ ನೀನಿತ್ತು ಕ್ಷಣ ಬಿಡದೆಲೆ ನೀನಗಣಿತ ಕಾರ್ಯವ ದಣಿಯದೆ ಮಾಡಿಸಿ ಧಣಿಗರ್ಪಿಸುವಿಯೊ1 ಶ್ರೀ ಜಗದ್ಗುರುವರೇಣ್ಯನೆ ನೀನು ಋಜುಸಾರ್ವಭೌಮ ನಿಜ ಪಾದಾಂಬುಜವ ತೋರಿಸೊ ಇನ್ನು ಈ ಜಗ ಕಾರ್ಯ ನಿವ್ರ್ಯಾಜದಿ ಮಾಡುತ ನೀ ಜಯಾಪತಿಗರ್ಪಿಸಿ ಅಜಪದ ಪಡೆದೆಯೊ2 ಕೋಟಿತ್ರಯರೂಪನೆ ಕಾಯುವುದಯ್ಯ ದಾಟಿಸು ಭವಶರಧಿಯಾ ಪಾಟುಪಟ್ಟದ್ದೆಲ್ಲ ನೀನರಿಯಾ ಸಾಟಿಯುಂಟೆ ಲಲಾಟನೇತ್ರ ಬೆ ನ್ನಟ್ಟಿ ಬರಲು ಕೇದಾರಕೆ ಅಟ್ಟಿದೆ 3 ಮರಣ ಜನುಮಂಗಳು ಬಂದರೆ ಬರಲಿ ಹರಿಗುರುಗಳಲಿ ಸ್ಮರಣೆಯು ತಪ್ಪದೆ ನಿಶ್ಚಲವಿರಲಿ ಉರುತರ ಹರಿಸರ್ವೋತ್ತಮವೆಂಬುವ ತರತಮ ಭೇದವು ನಿರುತವು ಇರಲಿ 4 ಶ್ರವಣ ಮನನಾದಿ ಭಕುತಿಯನ್ನು ಪವಮಾನ ನೀ ಕೊಡು ಅನುಮಾನಿಸಬೇಡವೋ ನೀ ಇದಕ್ಕಿನ್ನು ಭವಮೋಚಕ ಶ್ರೀ ವೇಂಕಟೇಶ ಇನ್ನೊಳಹೊರಗಿಹನೆಂಬುವುದನು ತೋರೋ 5
--------------
ಉರಗಾದ್ರಿವಾಸವಿಠಲದಾಸರು
ಪಿಡಿ ಎನ್ನ ಕೈಯ್ಯ ರಂಗಯ್ಯ ಪ ಪಿಡಿ ಎನ್ನ ಕೈಯ ಪಾಲ್ಗಡಲ ಶಯನ ಮೋಹ ಮಡುವಿನೋಳ್ ಬಿದ್ದು ಬಾಯ್ಬಿಡುವೆ ಬೇಗದಿ ಅ ನೀರಜನಾಭಾ ನಂಬಿದೆ ನಿನ್ನ ನೀರಪ್ರದಾಭಾ ಕಾರುÀಣ್ಯ ನಿಧಿ ಲಕ್ಷ್ಮೀನಾರಸಿಂಹನ ಪರಿ ವಾರಸಹಿತ ಈ ಶರೀರದೊಳಡಗಿರ್ದು ಘೋರತರ ಸಂಸಾರ ಪಂಕದಿ ಚಾರು ವರಿವನ ದೂರ ನೋಡುವ ರೇ ರಮಾಪತೆ ಗಾರುಮಾಡದೆ ಚಾರುವಿಮಲ ಕರಾರವಿಂದದಿ 1 ಅನಿಮಿತ್ತ ಬಂಧೋ ನೀನೇ ಗತಿ ಗುಣ ಗಣಸಿಂಧೋ ವಿಧಿ ಭವಸಂಕ್ರಂ ದನ ಮುಖ್ಯ ವೇದ ಸನ್ಮುನಿ ಗಣಾರ್ಚಿತ ಪಾದಾ ಅನುಜ ತನುಜಾಪ್ತಾನುಗ ಜನನೀ ಸದನ ಸಂ ಹನÀನ ಮೊದಲಾದಿನಿತು ಸಾಕುವ ಘನತೆ ನಿನ್ನದು ಜನುಮ ಜನುಮದಿ 2 ಶ್ರೀ ಜಗನ್ನಾಥವಿಠ್ಠಲ ದ್ವಿಜರಾಜ ವರೂಥ ಓಜಕಾಮಿಕ ಕಲ್ಪ ಭೂಜ ಭಾಸ್ಕರ ಕೋಟಿ ತೇಜ ಮನ್ಮನದಿ ವಿರಾಜಿಸು ಪ್ರತಿದಿನ ಈ ಜಗತ್ರಯ ಭಂಜನನೆ ಬಹು ಸೋಜಿಗವಲಾ ನೈಜ ನಿಜನಿ ವ್ರ್ಯಾಜದಿಂದಲಿ ನೀ ಜಯಪ್ರದ ನೈಜ ಜನರಿಗೆ ಹೇ ಜಗತ್ಪತೇ 3
--------------
ಜಗನ್ನಾಥದಾಸರು
ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ಪ ಈ ಜಗದೊಳು ನಿಮಗೆಣೆಗಾಣೆ ಸತತ ನಿ - ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ ಅ.ಪ. ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ ಚರಿಸುತ ಧರೆಯೊಳು ಮೆರೆವ ಮಹಾತ್ಮರ ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ ದುರಿತರಾಶಿಗಳಿರಗೊಡದೆ ನೆರೆ ಪರಮಮುಕ್ತಿಯ ದಾರಿ ತೋರುತ ಸಿರಿಸಹಿತ ಹರಿ ತೋರುವಂದದಿ ಕರುಣ ಮಾಳ್ಪ ಸುಗಣಮಹೋದಧಿ 1 ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ ಭುವನೈಕ ವೇದವದ್ಯನ ಶ್ರವಣಭಕುತಿಯಿಂದ ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ ಭುವನ ಪಾವನ ಮಾಡಲೋಸುಗ ಅವನಿ ತಳದಿ ವಿಹರಿಸುತಿಹ ಗುರು 2 ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ - ದ್ಗುಹಾಧೀಶನನು ಬಿಡದೆ ಅನುದಿನ ಸ್ಮರಿಸುತ ಸಹನದಿ ಶಮದಮಯತು ನಿಯಮಗಳನ್ನು ವಹಿಸಿ ಶ್ರೀದವಿಠಲನಂಘ್ರಿಯ ಮಹಿಮೆ ತೋರುತ ಪೂಜಿಸುತ ಬಲು ಮಹಿತಪೂರ್ಣಾನಂದತೀರ್ಥರ ವಿಹಿತ ಶಾಸ್ತ್ರಗಳರಿತು ಬೋಧಿಪ 3
--------------
ಶ್ರೀದವಿಠಲರು