ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರೆ ಆರುತಿ ಸಾರಸಾಂಬಕಿ ಭಾರತೀವರಗೆ ಬೆಳಗುವೆನು ಪ ನರಸಿಂಹಾರ್ಯ ಶೇವಿತಗೆ ಅ.ಪ ನೂರುಯೋಜನ ವಾರಿನಿಧಿಯನು ಹಾರಿ ಜಾನಕಿಗೆ ಚಾರು ಮುದ್ರಿಕೆಯನಿತ್ತು ಪುರದಿಭಯ ತೋರಿರಾಕ್ಷಸಗೆ ನಾರಿಮಣಿಯ ಶುಭವಾರುತಿಯ ರಘುವೀರಗರುಹಿದ ಮಾರುತಾತ್ಮಜಗೆ 1 ಇಂದು ಕುಲದಲಿ ಬಂದು ಕುಂತಿಯ ಕಂದನೆಂದೆನಿಸಿ ನಿಂದು ರಣದಿ ಖಳವೃಂದ ಸಹಿತ ಕುರುವೃಂದವನು ಮಥಿಸಿ ಛಂದದಲಿ ಪಡೆದಂಥ ಭೀಮಗೆ 2 ಭೂತಳದಿ ಸುಖತೀರ್ಥರೆನಿಸಿ ಸಚ್ಛಾಸ್ತ್ರವನು ರಚಿಸಿ ಭೀತಿ ಪುಟ್ಟಿಸುತ ಖ್ಯಾತಮಾಯ್ಗಳ ವ್ರಾತವನು ಜಯಿಸಿ ಪೂತ ಕಾರ್ಪರ ಕ್ಷೇತ್ರ ನರ ಮೃಗನಾಥನ ಪರಮಪ್ರೀತಿ ಪಾತ್ರನಿಗೆ 3
--------------
ಕಾರ್ಪರ ನರಹರಿದಾಸರು
ದೇವೀ ಸಲಹೆನ್ನನೂ | ತವ ಬಾಲಕನನೂ | ದೇವೀ ಸಲಹೆನ್ನನೂ ಪ ಕಾವ ನಿಜ ಸುಖವೀವ ಶಕ್ತಿಯೆ | ದೇವ ವಿಶ್ವೇಶ್ವರನ ಸುಪ್ರೀಯೆ ಅ.ಪ ಚಂಡನಾಡುತ ರಕ್ತಬೀಜರ | ಹಿಂಡಿ ರಕ್ತನುಂಡ ಶಂಕರೀ 1 ದುರಿತ ಹರೆ ಆರ್ಯಾ ಕಾತ್ರ್ಯಾಯನಿಯೇ | ಗೌರಿ ಹೈಮಾವತಿ | ಸುರಮುನೀ ಸುತೆ ಸರ್ವಮಂಗಲೆ | ಶರಣು ಶರ್ವಾಣಿಯೆ ರುದ್ರಾಣಿಯೆ 2 ಭವ ಸರ್ವ ಕಾರಣ ಭೂತೆ ಮುನಿ ಸುತೆ | ಸರ್ವ ಸೌಖ್ಯ ಸುಖ ಪ್ರದಾಯಕಿ 3 ಜಗದ್ಭರಿತೆ ಸದ್ಗುಣ | ಶುಭ ತತ್ವಾತೀತೆ ನಿರುಪಮ ಶಕ್ತಿ ದೇವತೆ | ಸೋತೆ ನೀ | ದಾರಿದ್ರ ದುಃಖ ವ್ರಾತವನು ಪರಿಹರಿಸಿ ರಕ್ಷಿಸೆ4 ತಂದೆ ತಾಯೆನ್ನ ಬಂಧು ಬಳಗಗಳೂ | ನಾರಾಯಣಿಯನೀ- | ಹೊಂದಿರುವ ತಾಪತ್ರಯವನಾ | ನಂದದಿಂದಲಿ ಪಾರಗಾಣಿಸಿ | ತಿಂದೆನ್ನನು ಸದಾನಂದನೆನಿಸುತ 5
--------------
ಸದಾನಂದರು