ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ
ಶುಭ ಕಾಯೆ ದಯದಿ ಹರಿ
ವಿಧಿ ಕಾಯಜ ತಾಯೆ ಪ
ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆ
ಭೀಕರಳೆನಿಸುತ | ವ್ಯಾಕುಲಗೊಳಿಸದೆ
ನೀಕರುಣಿಸು ರತ್ನಾಕರನ ಮಗಳೆ 1
ಸೀತೆ ಸಾರಸನಯನೆ | ಶೀತಾಂಶುವಿನ ಭಗಿನಿ
ಮಾತೆ ನಮಿಪೆ ತವ | ಘಾತಕ ವ್ರಾತದ
ಭೀತೆಯ ತೋರದೆ | ಪ್ರೀತಿಯಿಂದೊಲಿದು 2
ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ
ಈಕ್ಷಣ ಕರುಣಕವಾಕ್ಷದಿಂದೀಕ್ಷಿಸು
ಪೇಕ್ಷವ ಮಾಡದೆ ಮೋಕ್ಷದಾಯಕಳೆ3
ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ
ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ
ಕುಟಿಲರಹಿತೆ ಶತ | ತಟಿತ ಸನ್ನಿಭಳೆ4
ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ ಸತಿಯೆ
ನಾ ಮೊರೆ ಹೊಕ್ಕೆನು | ಪ್ರೇಮದಿಂದಲಿ |ಸು
ಕ್ಷೇಮಗರೆದು ಮಮಧಾಮದಿ ನೆಲಸೆ 5