ನಮಿಸುವೆನು ಭುವನೇಂದ್ರ ಗುರುರಾಯರ
ಅಮಿತ ಮಹಿಮಗೆ ಅಹೋರಾತ್ರಿಯಲಿ ಬಿಡದೆ ಪ
ಸಿದ್ಧಾರ್ಧಿ ನಾಮ ಸಂವತ್ಸರದ ವೈಶಾಖ
ಶುದ್ಧೇತರ ಪಕ್ಷ ಸಪ್ತಮಿಯಲಿ
ವಿದ್ವತ್ಸಭಾ ಮಧ್ಯದಲಿ ರಾಮವ್ಯಾಸರ
ಪದದ್ವಯವನೈದಿದ ಮಹಾಮಹಿಮರನ ಕಂಡು 1
ರಾಜವಳ್ಳಿ ಎಂಬ ಪುರದಿ ಕರುಣದಿ ಪಾರಿ
ವ್ರಾಜಕಾಚಾರ್ಯ ವರವತಂಸ ಪಾದ
ರಾಜೀವಯುಗಳ ಧೇನಿಸುತಿಪ್ಪರಿಗೆ ಕಲ್ಪ
ಭೂಜದಂದದಿ ಬೇಡಿದಿಷ್ಟಾರ್ಥ ಕೊಡುವರಿಗೆ 2
ಶ್ರೀ ತುಂಗ ಭದ್ರಾ ತರಂಗಿಣೀ ತೀರದಲಿ
ಪಾದ ಮೂಲದಲ್ಲಿ
ಪ್ರೀತಿ ಪೂರ್ವಕವಾಗಿ ವಾಸವಾದರು ಜಗ
ನ್ನಾಥ ವಿಠಲನ ಕಾರುಣ್ಯಪಾತ್ರರ ಕಂಡು 3