ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಜೀವನೌಷಧ ಸುಲಭದಿ ದೊರೆತಮ್ಯಾ- ಲಂಜುವದ್ಯಾಕಿನ್ನು ಕುಂಜರ ವರದಾಯಿ ಕುಬ್ಜೆಗೊಲಿದ ನಮ್ಮ ಕಂಜನಾಭನ ಪಾದಕಂಜರ ನೆನವೆಂಬ ಪ. ಕಲಾನಿಯಮವಿಲ್ಲ ಕುಡಿದರೆ ಖೈಂಯಲ್ಲ ನಾಲಿಗೆ ತುದಿಯೊಳಗಿರುವುದೆಲ್ಲಾ ಸಾಲಾಗಿ ನಿಲುವುದು ಸರಿಯಾದ ವ್ರಯದಿಂದ ಪಾಲಗಡಲನಾಥ ಪಾಲಿಸಿ ಕುಡಿಸುವ 1 ವ್ಯತ್ಯಾಸದಿಂದಲಪಥ್ಯವಾಗದು ಭ್ರಮೆ ಪಿತ್ತಶಾಂತಿಯನೀವುದು ತುತ್ತು ತುತ್ತಿಗೆ ನಮ್ಮ ಸತ್ಯವರನ ಪೆಸ- ರೆತ್ತಲು ಭವರೋಗ ಕತ್ತರಿಸುವ ದಿವ್ಯ 2 ಅಡವಿಯೊಳಗೆ ಪೋಗಿ ಕಡಿದು ತರುವುದಲ್ಲ ಅಡಿಗೆಗಿಕ್ಕುವ ಪಾಕ ಮಾಳ್ಪುದಲ್ಲ ಕುಡಿದು ನೋಡಿದರತಿ ಕಡುಮಧುರವು ನಮ್ಮ ಒಡೆಯ ವೆಂಕಟರಾಜನಡಿಗಳ ನೆನೆವೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ